ಗುಡ್ಡೆಹೊಸೂರು, ಮೇ ೩: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರು ಈ ವ್ಯಾಪ್ತಿಯ ಅತ್ತೂರು, ಮಾದಾಪಟ್ಟಣ, ಬಸವನಹಳ್ಳಿ, ಬೆಟ್ಟಗೇರಿ, ರಂಗಸಮುದ್ರ ನಂಜರಾಯಪಟ್ಟಣ ವಾಲ್ನೂರು, ತ್ಯಾಗತ್ತೂರು ವಿಭಾಗಗಳಲ್ಲಿ ಪ್ರಚಾರ ನಡೆಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ ಮತ್ತು ಪಂಚಾಯಿತಿಯ ಪಕ್ಷದ ಸದಸ್ಯರುಗಳು, ಮುಖಂಡರು ಭಾಗವಹಿಸಿದ್ದರು. ಈ ಸಂಧರ್ಭ ಮಾತನಾಡಿದ ಅಭ್ಯರ್ಥಿ ರಂಜನ್ ಕ್ಷೇತ್ರದಲ್ಲಿ ಈ ಹಿಂದೆ ನಡೆಸಿದ ಅಭಿವೃಧ್ಧಿ ಕೆಲಸಗಳ ಬಗ್ಗೆ ತಿಳಿಸಿದರು. ಬಸವನಹಳ್ಳಿಯಲ್ಲಿ ಬಹಿರಂಗ ಸಭೆಯಲ್ಲಿ ಜಿಲ್ಲಾ.ಪಂ ಮಾಜಿ ಸದಸ್ಯ ಮಂಜುಳ ಮತ್ತು ಬಿ.ಜೆ.ಪಿ. ಪ್ರಮುಖ ವಿ.ಕೆ.ಲೊಕೇಶ್ ಮಾತನಾಡಿ, ಕೊಡಗಿನ ಸಂಕಷ್ಟದ ದಿನಗಳಲ್ಲಿ ಪ್ರಮುಖವಾಗಿ ಕೊರೊನಾ ಸಂದರ್ಭ ಶಾಸಕರಾದ ರಂಜನ್ ಅವರು ಪಿ.ಪಿ. ಕಿಟ್ ಧರಿಸಿ ಆಸ್ಪತ್ರೆಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ನಡೆಸಿ ರಾಜ್ಯದ ಗಮನ ಸೆಳೆದಿದ್ದಾರೆ ಎಂದರು.

ಗುಡ್ಡೆಹೊಸೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಡೆಕ್ಕಲ್ ನಿತ್ಯಾನಂದ ಮತ್ತು ಮಾದಾಪಟ್ಟಣದ ಪ್ರವೀಣ್‌ಕುಮಾರ್, ಪಕ್ಷದ ಪ್ರಮುಖರಾದ ಎಂ.ಆರ್. ಉತ್ತಪ್ಪ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.