ನಾಪೋಕ್ಲು, ಮೇ ೩: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಲವು ತಂಡಗಳು ಮುನ್ನಡೆ ಸಾಧಿಸಿದವು.

ನಡಿಕೇರಿಯಂಡ ವಿರುದ್ಧ ಮುಕ್ಕಾಟಿರ ತಂಡ ಗೆಲುವು ಸಾಧಿಸಿತು. ಮುಕ್ಕಾಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ ೪೩ ರನ್ ಗಳಿಸಿದರೆ ನಡಿಕೇರಿಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿತು. ಪುಲಿಯಂಡ ವಿರುದ್ಧ ಚೋನಿರ ತಂಡ ಜಯ ಸಾಧಿಸಿತು. ಪುಲಿಯಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿದರೆ ಚೋನಿರ ಒಂದು ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿತು. ಪಾಲೆಂಗಡ ವಿರುದ್ಧ ಕಡೇಮಾಡ ತಂಡ ಜಯಗಳಿಸಿತು. ಪಾಲೆಂಗಡ ಮೂರು ವಿಕೆಟ್ ನಷ್ಟಕ್ಕೆ ೩೩ ರನ್ ಗಳಿಸಿತು. ಕಡೆಮಾಡ ನಾಲ್ಕು ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿ ೧೯ ರನ್‌ಗಳ ಜಯ ಸಾಧಿಸಿತು. ಮಾದೆಯಂಡ ಏಳು ವಿಕೆಟ್ ನಷ್ಟಕ್ಕೆ ೨೩ ರನ್ ಗಳಿಸಿದರೆ, ಮಲಚೀರ ತಂಡ ಮೂರು ವಿಕೆಟ್ ನಷ್ಟಕ್ಕೆ ೨೫ ರನ್ ಗಳಿಸಿ ಗೆಲುವು ಸಾಧಿಸಿತು. ಕುಪ್ಪಣಮಾಡ ಆರು ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿದರೆ ಪೊನ್ನಿಮಾಡ ೫೪ ರನ್ ಗಳಿಸಿ ಗೆಲುವು ಸಾಧಿಸಿತು. ಆಪಟ್ಟಿರ ೪೫ ರನ್ ಗಳಿಸಿದರೆ ಚೆಟ್ಟಿಯಾರಂಡ ತಂಡ ಎರಡು ವಿಕೆಟ್ ನಷ್ಟಕ್ಕೆ ೬೫ ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು. ಮಲಚೀರ ನಾಲ್ಕು ವಿಕೆಟ್ ನಷ್ಟಕ್ಕೆ ೫೭ ರನ್ ಗಳಿಸಿತು. ಮುಕ್ಕಾಟಿರ( ಕಡಗದಾಳು) ತಂಡ ಎರಡು ವಿಕೆಟ್ ನಷ್ಟಕ್ಕೆ ೮೦ ರನ್ ಗಳಿಸಿ ಗೆಲುವು ಸಾಧಿಸಿತು.

ನೆಲ್ಲಿರ ತಂಡದ ವಿರುದ್ಧ ಬಲ್ಲಚಂಡ ಜಯ ಸಾಧಿಸಿತು. ನೆಲ್ಲಿರ ತಂಡ ೫೫ ರನ್ ಗಳಿಸಿದರೆ ಬಲ್ಲಚಂಡ ೫೬ ರನ್ ಗಳಿಸಿ ಮುನ್ನಡೆ ಸಾಧಿಸಿತು. ಮಳವಂಡ ತಂಡದ ವಿರುದ್ಧ ಮಾಯನಮಾಡ ತಂಡ ಗೆಲುವು ಸಾಧಿಸಿತು. ಮಳವಂಡ ಆರು ವಿಕೆಟ್ ನಷ್ಟಕ್ಕೆ ೭೦ ರನ್ ಗಳಿಸಿದರೆ ಮಾಯನಮಾಡ ನಾಲ್ಕು ವಿಕೆಟ್ ನಷ್ಟಕ್ಕೆ ೭೯ ರನ್ ಗಳಿಸಿತು. ಅಯ್ಯಮಾಡ ತಂಡ ಸಾದೆರ ವಿರುದ್ಧ, ಅತ್ರಂಗಡ ತಂಡ ನಾಪಂಡ ತಂಡದ ವಿರುದ್ಧ, ಪೊನ್ನಿಮಾಡ ಕಡೆಮಾಡ ವಿರುದ್ಧ, ಅತ್ರಂಗಡ ಮಾಯನಮಾಡ ವಿರುದ್ಧ, ಮಲ್ಲಜ್ಜಿರ ಚೆಟ್ಟಿಯಾರಂಡ ವಿರುದ್ಧ ಗೆಲುವು ಸಾಧಿಸಿದವು.

ಬೇತು ಗ್ರಾಮದ ಮಕ್ಕಿ ಶಾಸ್ತಾವು ಉತ್ಸವದ ಪ್ರಯುಕ್ತ ಗುರುವಾರದ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲ.

- ದುಗ್ಗಳ ಸದಾನಂದ.