ಕಣಿವೆ, ಮೇ ೩ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ೨೩ ವರ್ಷಗಳಿಂದ ಕಾರ್ಯ ನಿರ್ವಹಿಸಿ ಲೆಕ್ಕಿಗರಾಗಿ ನಿವೃತ್ತಿಯಾದ ವಿಜಯಕುಮಾರ್ ಅವರನ್ನು ಸಹಕಾರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಸಹಕಾರ ಸಂಸ್ಥೆಗಳು ಅಭಿವೃದ್ದಿ ಪಥದಲ್ಲಿ ಮುಂದುವರೆಯಲು ಅಲ್ಲಿನ ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯನಿರ್ವಹಣೆ ಮತ್ತು ಆಡಳಿತ ಮಂಡಳಿಯೊAದಿಗೆ ತೋರುವ ಸಹಕಾರ ಅತೀ ಮುಖ್ಯ ಎಂದರು.

ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್, ನಿರ್ದೇಶಕರಾದ ಎಂ.ಕೆ.ಗಣೇಶ್, ಪಿ.ಬಿ.ಯತೀಶ್, ಅಬ್ದುಲ್ ಖಾದರ್, ಕೈಗಾರಿಕೋದ್ಯಮಿಗಳ ಸಂಘದ ನಿರ್ದೇಶಕ ಕೆ.ಎಸ್.ಮಹೇಶ್, ಸಂಸ್ಥೆಯ ಮಾಜಿ ಕಾರ್ಯ ನಿರ್ವಹಣಾಧಿಕಾರಿ ದೇಚಮ್ಮ, ಅಧಿಕಾರಿ ಬಿ.ಬಿ. ಲೋಕೇಶ್ ಸೇರಿದಂತೆ ಸಹಕಾರಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳಿದ್ದರು.