ಮಡಿಕೇರಿ, ಮೇ ೩: ಬಿಜೆಪಿಯ ತತ್ವ ಸಿದ್ದಾಂತಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿ.ಎ ಜೀವಿಜಯ, ದಿಢೀರನೆ ಅಪ್ಪಚ್ಚು ರಂಜನ್ಗೆ ಬೆಂಬಲ ಸೂಚಿಸುವ ಮಾತನಾಡಿದ್ದು, ಅವರಲ್ಲಿದ್ದ ಜಾತ್ಯತೀತ ತತ್ವ ಎಲ್ಲಿ ಹೋಯಿತು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಪ್ರಶ್ನಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ೭ ಆಕಾಂಕ್ಷಿಗಳಿದ್ದರು. ಕ್ಷೇತ್ರದ ೪೮ ವಲಯಗಳಲ್ಲೂ ಸಭೆ ನಡೆಸಿದ ಮಡಿಕೇರಿ, ಮೇ ೩: ಬಿಜೆಪಿಯ ತತ್ವ ಸಿದ್ದಾಂತಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿ.ಎ ಜೀವಿಜಯ, ದಿಢೀರನೆ ಅಪ್ಪಚ್ಚು ರಂಜನ್ಗೆ ಬೆಂಬಲ ಸೂಚಿಸುವ ಮಾತನಾಡಿದ್ದು, ಅವರಲ್ಲಿದ್ದ ಜಾತ್ಯತೀತ ತತ್ವ ಎಲ್ಲಿ ಹೋಯಿತು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಪ್ರಶ್ನಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ೭ ಆಕಾಂಕ್ಷಿಗಳಿದ್ದರು. ಕ್ಷೇತ್ರದ ೪೮ ವಲಯಗಳಲ್ಲೂ ಸಭೆ ನಡೆಸಿದ ಎಲ್ಲಾ ಆಕಾಂಕ್ಷಿಗಳು ನಿರ್ಧರಿಸಿದ್ದರು. ಮಂಥರ್ ಗೌಡ ಕೊಡಗಿನವರಲ್ಲ ಎನ್ನುವ ಜೀವಿಜಯ,
(ಮೊದಲ ಪುಟದಿಂದ) ಈ ಹಿಂದೆ ಎಂಎಲ್ಸಿ ಚುನಾವಣೆ ವೇಳೆ ಮಂಥರ್ಗೆ ಬೆಂಬಲವಾಗಿ ನಿಂತಿದ್ದರು. ಈಗ ಟಿಕೆಟ್ ಸಿಗದೇ ಇರುವ ಕಾರಣಕ್ಕೆ ಇಲ್ಲಸಲ್ಲದ ಕಾರಣ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಲೂ ಜೀವಿಜಯ ಮನಸ್ಸು ಬದಲಾಯಿಸಿ ಪಕ್ಷದಲ್ಲಿ ಮುಂದುವರಿಯುವ ಯೋಚನೆ ಮಾಡಿದರೆ, ಸ್ವಾಗತಿಸುವುದಾಗಿ ತಿಳಿಸಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅನಂತ್ ಕುಮಾರ್ ಅಸಮಾಧಾನಗೊಂಡು ರಾಜೀನಾಮೆ ಘೋಷಿಸಿದ್ದಾರೆ. ತಾನು ಅವರ ಕರೆ ಸ್ವೀಕರಿಸುತ್ತಿಲ್ಲ ಎನ್ನುವ ಕಾರಣ ನೀಡಿರುವುದು ಶುದ್ದ ಸುಳ್ಳು. ಸಾಕಷ್ಟು ಬಾರಿ ಅವರಿಗೆ ಕರೆ ಮಾಡಿದ್ದೇನೆ. ಅವರೇ ಕರೆ ಸ್ವೀಕರಿಸದೆ ತÀನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು. ಭಜರಂಗದಳ ನಿಷೇಧ ವಿಚಾರ ಮುನ್ನಲೆಗೆ ಬಂದಿದ್ದರೂ ಅದಕ್ಕೆ ಜನತೆ ಮಹತ್ವ ನೀಡುವುದಿಲ್ಲ; ಅಭಿವೃದ್ದಿ ಆಧಾರದಲ್ಲಿ ಜನರು ಮತ ನೀಡುತ್ತಾರೆ ಎಂದು ಧರ್ಮಜ ಉತ್ತಪ್ಪ ಉತ್ತರಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಬಿ.ಎ ಜೀವಿಜಯ ಎರಡನೇ ಹಂತದ ನಾಯಕರಿಗೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರಬೇಕಿತ್ತು. ಇಳಿ ವಯಸ್ಸಿನಲ್ಲಿ ಕಿರಿಯರಿಗೆ ತಮ್ಮ ರಾಜಕೀಯ ಅನುಭವಗಳನ್ನು ಧಾರೆ ಎರೆಯುವ ದೊಡ್ಡತನ ಇರಬೇಕಿತ್ತು. ಮಂಥರ್ ಗೌಡ ಗೆಲುವಿಗೆ ಶ್ರಮಿಸುವುದಾಗಿ ಹಿರಿಯ ನಾಯಕರ ಸಮ್ಮುಖದಲ್ಲಿ ಹೇಳಿದ್ದರು. ಎಲ್ಲಾ ಅಡೆತಡೆಗಳನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸುತ್ತದೆ ಎಂದು ಹೇಳಿದರು.
ಹಿರಿಯ ಮುಖಂಡ ಅರುಣ್ ಮಾಚಯ್ಯ ಮಾತನಾಡಿ, ಜೀವಿಜಯ ಅವರ ದಿಢೀರ್ ರಾಜೀನಾಮೆ ನೋವುಂಟು ಮಾಡಿದೆ. ಅಸಮಾಧಾನಗೊಂಡು ಪಕ್ಷದಿಂದ ಹೊರ ನಡೆದಿದ್ದಾರೆ. ಅವರ ಮುಂದಿನ ರಾಜಕೀಯ ಜೀವನ ಸುಗಮವಾಗಿರಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮುಖಂಡ ಮಂಜುನಾಥ್ ಹಾಜರಿದ್ದರು.