*ಗೋಣಿಕೊಪ್ಪ, ಮೇ ೩: ಆದಿವಾಸಿಗಳ ಜೀವನ ಪ್ರಗತಿಗೆ ಮೋದಿ ಸರ್ಕಾರ ಕ್ರಮ ಕೈಗೊಂಡು ಬುಡಕಟ್ಟು ಸಮುದಾಯದವರ ಅಭಿವೃದ್ದಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಡುಮಕ್ಕಳ ಸುಸಜ್ಜಿತ ಬದುಕಿನ ಬಗ್ಗೆ ಕಾಳಜಿ ಹೊಂದಿದೆ ಎಂಬ ನಿರ್ಧಾರದೊಂದಿಗೆ ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಜೆ.ಡಿ.ಎಸ್. ಪಕ್ಷವನ್ನು ತೊರೆದಿದ್ದೇನೆ ಎಂದು ಆದಿವಾಸಿ ಜನಾಂಗದ ಹೋರಾಟಗಾರ ಪಿ.ಎಸ್. ಮುತ್ತ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜನಪರ ಕೆಲಸಗಳನ್ನು ಸಮೀಪದಿಂದ ವೀಕ್ಷಿಸಿ ಪ್ರಾದೇಶಿಕ ಪಕ್ಷ ೨೦೦೪ರಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಬಿ ಫಾರಂ ನೀಡಿ ಅನುವು ಮಾಡಿಕೊಟ್ಟಿತ್ತು. ಆದರೆ, ಇಂದು ಪ್ರಪಂಚದಾದ್ಯAತ ಗುರುತಿಸಿಕೊಂಡು ಭಾರತ ದೇಶ ಹೆಮ್ಮೆಯಿಂದ ಮೆರೆಯುತ್ತಿದೆ. ಇದಕ್ಕೆ ಮೂಲ ಕಾರಣ ಮೋದಿಜೀಯವರ ಪ್ರಯತ್ನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆದಿವಾಸಿ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ ಹುಟ್ಟುಹಬ್ಬವನ್ನು ಪ್ರದಾನಿ ನೇರವಾಗಿ ಅವರ ಜನ್ಮ ಸ್ಥಳದಲ್ಲಿ ಆಚರಿಸುತ್ತಿರುವುದು, ೭೫ನೇ ವರ್ಷದ ಸ್ವಾತಂತ್ರ÷್ಯ ಭಾರತದಲ್ಲಿ ಸಂವಿಧಾನವನ್ನು ಗೌರವಿಸಿದ ಒಂದು ಸಂದರ್ಭ, ಬುಡಕಟ್ಟು ಸಮುದಾಯದ ತಾಯಿ ದ್ರೌಪದಿ ಮುರ್ಮು ಅವರನ್ನು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟçಪತಿಯಾಗಿ ಆಯ್ಕೆ ಮಾಡಿರುವುದು ಇಡೀ ದೇಶದ ಆದಿವಾಸಿ ಸಮುದಾಯಕ್ಕೆ ಸಂದ ಗೌರವ. ಕಾಡುಮಕ್ಕಳಿಗೆ ಸಿಕ್ಕಿದ ಗೌರವ ಎಂದು ಶ್ಲಾಘಿಸಿದರು.

ಕೊಡಗಿನಲ್ಲಿ ಬಿಜೆಪಿ ಆಡಳಿತದಿಂದ ಹಲವು ಅಭಿವೃದ್ಧಿ ಕಂಡಿದೆ. ಬ್ರಿಟೀಷರ ಕಾಲದ ರಸ್ತೆ, ಕಿರಿದಾದ ಏಕಮುಖ ಸೇತುವೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಕೊಡಗಿನಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ದಿ ಕಂಡಿದೆ. ರೈತರು, ಮಕ್ಕಳು, ಮಹಿಳೆಯರು, ವಯಸ್ಕರು, ವಿಧÀವೆಯರಿಗೆ ಸಾಕಷ್ಟು ಯೋಜನೆಗಳನ್ನು ತಲುಪಿಸುವಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಶ್ರಮಿಸಿದ್ದಾರೆ ಎಂದು ಹೇಳಿದರು.