ಕೂಡಿಗೆ, ಮೇ ೨: ಕುಶಾಲನಗರ ಅರಣ್ಯ ಇಲಾಖೆ ಮತ್ತು ವೀರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಹೊಸಕೋಟೆಯಿಂದ ಆನೆಕಾಡಿನವರೆಗಿನ ರಸ್ತೆ ಬದಿಯಲ್ಲಿ ಹರಡಲಾಗಿದ್ದ ಪ್ಲಾಸ್ಟಿಕ್ ಮತ್ತು ನೀರಿನ ಬಾಟಲಿಗಳನ್ನು ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪ್ರವಾಸಿಗರು ರಸ್ತೆ ಬದಿಯಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. ಹೊಸಕೋಟೆಯಿಂದ ಆನೆಕಾಡಿನವರೆಗೆ ಸಂಗ್ರಹವಾದ ಕಸವನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಟ್ರಾö್ಯಕ್ಟರ್‌ನಲ್ಲಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ೫೦ ವಿದ್ಯಾರ್ಥಿಗಳು ಮತ್ತು ಕುಶಾಲನಗರ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಸಂದರ್ಭ ಕುಶಾಲನಗರ ವಲಯ ಅರಣ್ಯಧಿಕಾರಿ ಕೆ.ವಿ. ಶಿವರಾಮ್, ಉಪವಲಯ ಅರಣ್ಯಧಿಕಾರಿಗಳಾದ ಕೆ.ಎನ್. ದೇವಯ್ಯ, ಅನಿಲ್ ಡಿಸೋಜ, ಕಾಲೇಜಿನ ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಅರ್ಜನ್ ಹಾಜರಿದ್ದರು.