*ಗೋಣಿಕೊಪ್ಪ, ಮೇ ೨: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮೇ ೨೧ ರಂದು ನಡೆಯಲಿರುವ ಪತ್ರಕರ್ತರ ಕ್ರಿಕೆಟ್ ಟೂರ್ನಿಗೆ ಆಟಗಾರರ ಆಯ್ಕೆ ಕಕೂನ್ ಸಭಾಂಗಣದಲ್ಲಿ ನಡೆಯಿತು.

ತಾವಳಗೇರಿ ಮೀಡಿಯಾ ವಾರಿಯರ್ಸ್, ಹಾತೂರು ಮೀಡಿಯಾ ಕಿಂಗ್ಸ್, ದೇವರಪುರ ಮೀಡಿಯ ಚಾಲೆಂಜರ್ಸ್, ಕುಟ್ಟ ಮೀಡಿಯಾ ಸ್ಟೆçöÊಕರ್ಸ್, ನಾಲ್ಕೇರಿ ಮೀಡಿಯಾ ಕ್ರಿಕೆಟರ್ಸ್, ಕಿರುಗೂರು ಮೀಡಿಯಾ ಕ್ರಿಕೆಟರ್ಸ್, ಬಾಳೆಲೆ ಪ್ರೆಸ್ ಸ್ಟರ‍್ಸ್, ಪೂಕೊಳ ಮಾಸ್ಟರ್ ಮೀಡಿಯಾ ತಂಡಗಳಿಗೆ ಅಟಗಾರರ ಆಯ್ಕೆ ನಡೆಸಲಾಯಿತು. ತಂಡಗಳ ನಾಯಕರಾದ ಎ.ಎಸ್. ಮುಸ್ತಫಾ, ಕಿಶೋರ್‌ರೈ ಕತ್ತಲೆಕಾಡು, ಹೇಮಂತ್, ಜಯಪ್ರಕಾಶ್, ಶಿವರಾಜ್, ಮಂಡೇಡ ಅಶೋಕ್, ಎಂ.ಎA. ಚನ್ನನಾಯಕ, ದಿವಾಕರ್ ಬೋಜಪ್ಪ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ಆಟದಲ್ಲಿ ಪಾಲ್ಗೊಳ್ಳುತ್ತಿರುವು ದರಿಂದ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ.

ಅಟಗಾರರ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದು ಪರಸ್ಪರ ಪರಿಚಯ, ಒಗ್ಗಟ್ಟು ಹೆಚ್ಚಿಸುತ್ತಿದೆ ಎಂದರು.

ಮೇ ೨೧ ರಂದು ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೂರ್ನಿ ನಡೆಸಲಾಗುವುದು ಎಂದು ಈ ಸಂದರ್ಭ ಪ್ರಕಟಿಸಲಾಯಿತು.

ತಾವಳಗೇರಿ ಮೀಡಿಯಾ ವಾರಿಯರ್ಸ್ ತಂಡದ ಮಾಲೀಕ ಮಚ್ಚಮಡ ಅನೀಶ್ ಮಾದಪ್ಪ, ಹಾತೂರು ಮೀಡಿಯಾ ಕಿಂಗ್ಸ್ ತಂಡದ ಮಾಲೀಕ ಕೇಳಪಂಡ ರಾಕೇಶ್ ಅಪ್ಪಯ್ಯ, ದೇವರಪುರ ಮೀಡಿಯ ಚಾಲೆಂಜರ್ಸ್ ತಂಡದ ಮೂರ್ತಿ ತಿರ್ಚಿ, ಕುಟ್ಟ ಮೀಡಿಯಾ ಸ್ಟೆçöÊಕರ್ಸ್ ತಂಡದ ಎಂ.ಎಸ್. ಸುಬ್ರಮಣಿ, ನಾಲ್ಕೇರಿ ಮೀಡಿಯಾ ಕ್ರಿಕೆಟರ್ಸ್ ತಂಡದ ಬಿ.ಇ. ಕಿರಣ್, ಕಿರುಗೂರು ಮೀಡಿಯಾ ಕ್ರಿಕೆಟರ್ಸ್ ತಂಡದ ಚೆಪ್ಪುಡೀರ ರೋಶನ್, ಬಾಳೆಲೆ ಪ್ರೆಸ್ ಸ್ಟರ‍್ಸ್ ತಂಡದ ಅಣ್ಣಪ್ಪ, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ವಿ.ವಿ. ಅರುಣ್‌ಕುಮಾರ್ ಇದ್ದರು.