ಮಡಿಕೇರಿ, ಮೇ ೨: ನಗರದ ಮಲ್ಲಿಕಾರ್ಜುನ ನಗÀರದ ಕೋದಂಡರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಆಚಾರ್ಯಾದಿ ಋತ್ವಿಜರ ಸ್ವಾಗತ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಗೇಹ ಪ್ರತಿಗ್ರಹ, ಶ್ರೀಗುರು ಗಣಪತಿ ಪೂಜೆ, ಭೂಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ವಿಧಾನ, ರಾಕ್ಷೆÆÃಘ್ನ ಹೋಮ, ದಿಕ್ಪಾಲಕಬಲಿ, ದೀಪಾರಾಧನೆ, ಸುದರ್ಶನ ಹೋಮ ನಂತರ ಮಹಾಪೂಜೆ ನೆರವೇರಿತು. ಕೋದಂಡರಾಮ ಭಜನಾ ಮಂಡಳಿ ಹಾಗೂ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ ನಡೆಯಿತು.
ಇಂದು ಮೆರವಣಿಗೆ
ತಾ. ೩ ರಂದು (ಇಂದು) ಕೂಡ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿದ್ದು ಬೆಳಿಗ್ಗೆ ೯ ಗಂಟೆಗೆ ನಗರದ ಗಾಂಧಿ ಮೈದಾನದಿಂದ ಧಾರ್ಮಿಕ ಮೆರವಣಿಗೆ ಹೊರಡಲಿದೆ. ದೇವಾಲಯ ಪ್ರತಿಷ್ಠಾಪನೆಯ ಪ್ರಧಾನ ಕಲಶ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊAದಿಗೆ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಕಲಶ ಹೊತ್ತ ಮಹಿಳೆಯರು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಭಜನಾ ತಂಡದೊAದಿಗೆ ಆಕರ್ಷಕ ಮೆರವಣಿಗೆ ನಗರದಲ್ಲಿ ತೆರಳಿ ಶ್ರೀ ಕೋದಂಡರಾಮ ದೇವಾಲಯ ಆವರಣ ತಲುಪಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ.