ನಾಪೋಕ್ಲು, ಏ. ೩೦: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ಮಾಳೆಯಂಡ, ಚಂಗುಲAಡ, ಪುಗ್ಗೇರ, ಪಚ್ಚಾರಂಡ, ದೇಯಂಡ, ಮಾಚಮಾಡ, ಅಣ್ಣಳಮಾಡ (ಬಿರುನಾಣಿ) ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ಮಾಳೆಯಂಡ ತಂಡ ೬೨ ರನ್ ಗಳಿಸಿ ಪೊನ್ನಚಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಚಂಗುಲAಡ ತಂಡ ಬೊಳ್ಳೇಪಂಡ ವಿರುದ್ಧ ೯೧ ರನ್ ಗಳಿಸಿ ಜಯಗಳಿಸಿತು. ಪುಗ್ಗೇರ ಮೋಟಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಕಾಂಚೇರಿರ ಮತ್ತು ಪಚ್ಚಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ೫೫ ರನ್ ಗಳಿಸಿ ಸಮಬಲ ಸಾಧಿಸಿದವು. ಬಿದ್ದಾಟಂಡ ತಂಡದ ವಿರುದ್ಧ ದೇಯಂಡ ತಂಡ ಜಯ ಸಾಧಿಸಿತು. ಮಾಚಮಾಡ ತಂಡ ಪುಳ್ಳಂಗಡ ವಿರುದ್ಧ ಜಯ ಸಾಧಿಸಿತು. ಅಣ್ಣಳಮಾಡ (ಬಿರುನಾಣಿ) ತಂಡವು ಚೊಟ್ಟೆಯಂಡ ವಿರುದ್ಧ ೬೪ ರನ್ ಗಳ ಗೆಲುವು ಸಾಧಿಸಿತು. ಅಳಮೇಂಗಡ ಮತ್ತು ಅಣ್ಣೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ನಷ್ಟಕ್ಕೆ ೪೦ ರನ್ಗಳಿಸಿ ಅಳಮೇಂಗಡ ತಂಡ ಗೆಲುವು ಸಾಧಿಸಿತು.
ಮದ್ರಿರ ತಂಡದ ವಿರುದ್ಧ ಪಂದ್ಯAಡ ಮೂರು ವಿಕೆಟ್ ನಷ್ಟಕ್ಕೆ ೧೧೫ ರನ್ ಗಳಿಸಿ ೭೧ ರನ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮದ್ರಿರ ೩೭ ರನ್ ಗಳಿಸಿತು. ಕೊಲ್ಲೀರ ವಿರುದ್ಧ ಚೆರುಮಂದAಡ ತಂಡಕ್ಕೆ ೩೭ ರನ್ಗಳ ಜಯ ಲಭಿಸಿತು. ಬಾಚಿನಾಡಂಡ ತಂಡವು ಕುಟ್ಟಂಡ (ಅಮ್ಮತ್ತಿ) ತಂಡದ ವಿರುದ್ಧ ಹಾಗೂ ಮೀದೇರಿರ ತಂಡವು ಮಾಚೆಟ್ಟಿರ ತಂಡದ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು. -ದುಗ್ಗಳ ಸದಾನಂದ