ಕೂಡಿಗೆ, ಏ. ೩೦: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೩-೨೪ ನೇ ಸಾಲಿಗೆ ರಾಜ್ಯ ಕ್ರೀಡಾ ವಸತಿ ಶಾಲೆಗಳಿಗೆ ಪ್ರವೇಶ ನೀಡುವ ಕುರಿತು ಹಿರಿಯರ ವಿಭಾಗದ ಕ್ರೀಡಾ ಪಟುಗಳ ಆಯ್ಕೆಯ ಅಂತಿಮ ಪರಿಶೀಲನಾ ಪ್ರಕ್ರಿಯೆ ಶಿಬಿರವು ಎಂಟು ದಿನಗಳ ಕಾಲ ನಡೆಯಲಿದ್ದು, ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಆರಂಭಗೊAಡಿತು.

ಆಯ್ಕೆ ಪ್ರಕ್ರಿಯೆಗೆ ಸಂಬAಧಿಸಿದAತೆ ಕ್ರೀಡಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವಕುಮಾರ್ ವಿದ್ಯಾರ್ಥಿಗಳಿಗೆ ಇಲಾಖೆಯ ಸೂಚನೆಗಳನ್ನು ಸಂಪೂರ್ಣವಾಗಿ ತಿಳಿಸಿದರು.

ಕಿರಿಯರ ವಿಭಾಗದ ಹಾಕಿ ಕ್ರೀಡೆಯಲ್ಲಿ ಒಟ್ಟು ೪೬ ವಿದ್ಯಾರ್ಥಿಗಳಿದ್ದು, ಹುಡುಗರು ೪೭, ಹುಡುಗಿಯರು ೧೯, ಫುಟ್‌ಬಾಲ್ ಆಯ್ಕೆಯಲ್ಲಿ ೨೯ ವಿದ್ಯಾರ್ಥಿಗಳಿದ್ದು, ಜಿಮ್ನಾಸ್ಟಿಕ್ಸ್ನಲ್ಲಿ ಇಬ್ಬರು ಬಾಲಕರು ಭಾಗವಹಿಸಿ ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನೋAದಣಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ವಸತಿ ಸೌಲಭ್ಯ ಮತ್ತು ಆಹಾರದ ವ್ಯವಸ್ಥೆಗಳನ್ನು ಒದಗಿಸಲಾಗಿದೆ ಎಂದು ನಿಯೋಜಿತ ಅಧಿಕಾರಿ ದೇವಕುಮಾರ್, ಶಿಬಿರಾಧಿಕಾರಿ, ಹಾಕಿ ತರಬೇತುದಾರರಾದ ಬಿ.ಎಸ್. ವೆಂಕಟೇಶ್ ಮಾಹಿತಿ ನೀಡಿದರು.

ತಾ.೨೮ ರಿಂದ ಮೇ ೨ರವರೆಗೆ ವಿದ್ಯಾರ್ಥಿಗಳಿಗೆ ಆಯಾ ಕ್ರೀಡೆಗಳಿಗೆ ಅನುಕೂಲವಾಗುವಂತೆ ಶಿಬಿರ ಮುಖೇನ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮರ್ಥ್ಯ ಹೊಂದಲು ಬೇಕಾಗುವ ಎಲ್ಲಾ ರೀತಿಯ ತರಬೇತಿ ನೀಡಲಾಗುತ್ತದೆ.

ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಹಾಕಿ ವಿಭಾಗದಿಂದ ಬಿ.ಎಸ್. ವೆಂಕಟೇಶ್, ಸಂಚಾಲಕ, ದಿನಾ ಮಣಿ, ಬಿಂದಿಯಾ, ಸುಂದರೇಶ್, ವಿಜಯ ಕೃಷ್ಣ, ರವೀಶ್ ಸದಸ್ಯರಾಗಿ ಭಾಗವಹಿಸಿದ್ದಾರೆ. ಫುಟ್ಬಾಲ್ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಯ ಬಿ.ಕೆ. ಗೋಪಾಲ್, ಮಂಡ್ಯದ ಬಾಬು ಗುರುರಾಜ್, ಹಾಸನದ ಕೃಷ್ಣ, ಬೆಂಗಳೂರಿನ ಮಹಮ್ಮದ್ ಮಸೂದ್, ಜಿಮ್ನಾಸ್ಟಿಕ್ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ತರಬೇತುದಾರ ಸುರೇಶ್, ಮೈಸೂರು ಲೋಕೇಶ್, ತುಮಕೂರು ಸುಧೀರ್, ದೇವದಾಸ್ ಭಾಗವಹಿಸಿ ಶಿಬಿರದ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ಸಂಚಾಲಕ ಬಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.

ಈಗಾಗಲೇ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ವಸತಿ ನಿಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ತರಗತಿಗಳಿಗೆ ಅನುಕೂಲವಾಗುವಂತೆ ಕೂಡಿಗೆ ವಸತಿ ಶಾಲೆಯಲ್ಲಿ ವಸತಿ ಸೌಕರ್ಯದ ವ್ಯವಸ್ಥೆಯನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪೋಷಕರ ಒತ್ತಾಯವಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ