ಮಡಿಕೇರಿ, ಏ. ೩೦: ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೯ನೇ ವರ್ಷದ ಉಚಿತ ಬೇಸಿಗೆ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭ ತಾ. ೧ ರಂದು (ಇಂದು) ನಡೆಯಲಿದೆ.
ಬೆಳಿಗ್ಗೆ ೭.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಭಾಗವಹಿಸುವರು. ಅತಿಥಿಗಳಾಗಿ ಡೆಕಾಥ್ಲಾನ್ ಚಾಂಪಿಯನ್ ಕೋದಂಡ ಪೂವಯ್ಯ ಅಪ್ಪಣ್ಣ, ಅಂರ‍್ರಾಷ್ಟಿçÃಯ ಮಾಸ್ಟರ್ಸ್ ಅಥ್ಲೆಟ್‌ಗಳಾದ ಪಾಲೇಕಂಡ ಬೋಪಯ್ಯ, ಪಾಲೇಕಂಡ ಬೆಳ್ಯಪ್ಪ, ಮಾರಮಾಡ ಮಾಚಮ್ಮ ಭಾಗವಹಿಸುವರು. ವಾಂಡರರ್ಸ್ ಅಧ್ಯಕ್ಷ ಕೋಟೆರ ಮುದ್ದಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾಕಿ ಹಾಗೂ ಅಥ್ಲೆಟಿಕ್ಸ್ನಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಗುವದು ಎಂದು ವಾಂಡರರ್ಸ್ ಪದಾಧಿಕಾರಿಗಳು ತಿಳಿಸಿದ್ದಾರೆ.