ಮಡಿಕೇರಿ, ಏ. ೩೦: ತಿರುವನಂತಪುರದಲ್ಲಿ ಜರುಗಿದ ಜೂನಿಯರ್ ಫೆಡರೇಷನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಯುವತಿ ರಾಜ್ಯವನ್ನು ಪ್ರತಿನಿಧಿಸಿದ್ದ ಬೊಳ್ಳಂಡ ಉನ್ನತಿ ಅಯ್ಯಪ್ಪ ಉತ್ತಮ ಪ್ರದರ್ಶನ ನೀಡಿದ್ದಾರೆ. ೧೦೦ ಮೀಟರ್ ಹರ್ಡಲ್ಸ್ನಲ್ಲಿ ಚಿನ್ನದ ಪದಕ ಹಾಗೂ ೨೦೦ ಮೀರ‍್ಸ್ ಹರ್ಡಲ್ಸ್ನಲ್ಲಿ ಬೆಳ್ಳಿಯ ಪದಕವನ್ನು ಉನ್ನತಿ ಪಡೆದಿದ್ದಾರೆ.

ಈ ಸಾಧನೆಯೊಂದಿಗೆ ಮುಂದಿನ ಜೂನ್‌ನಲ್ಲಿ ನಡೆಯಲಿರುವ ಜೂನಿಯರ್ ಏಷ್ಯನ್ ಚಾಂಪಿಯನ್ ಶಿಪ್‌ಗೆ ಉನ್ನತಿ ಆಯ್ಕೆಯಾಗಿದ್ದಾರೆ. ಇವರು ಅಥ್ಲೆಟಿಕ್ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ದಂಪತಿ ಪುತ್ರಿ.