ಮಡಿಕೇರಿ, ಏ. ೨೯ : ನಾಪೋಕ್ಲು ಸಮೀಪದ ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ ೧೦೦ ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿಗೆ ವಾಣಿಜ್ಯ ವಿಭಾಗದ ಅಫೀಫ ಪಿ.ಎ. ೫೬೬ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ವಾಣಿಜ್ಯ ವಿಭಾಗದ ಸುಹಾನ ಎಂ.ಎA. ೫೫೮ ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಆಯಿಶಾ ಮೊಹಸ್ಸೀನ ಕೆ.ವೈ ವಾಣಿಜ್ಯ ವಿಭಾಗದಲ್ಲಿ ೫೩೨ ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಆಯಿಶತ್ತು ಮುಬ್ಶೀನ ವಿಜ್ಞಾನ ವಿಭಾಗದಲ್ಲಿ ೫೨೩ ಅಂಕಗಳನ್ನು ಪಡೆದು ಕಾಲೇಜಿಗೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ