ಕೂಡಿಗೆ, ಏ. ೨೯: ಹಾಸನ ಹೆದ್ದಾರಿಯ ಸಂಪರ್ಕ ಸೇತುವೆಯಾದ ಹಾರಂಗಿ ನದಿಗೆ ಅಡ್ಡಲಾಗಿ ಕೂಡಿಗೆಯಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಮೇಲೆ ಎರಡೂ ಕಡೆಗಳಲ್ಲಿ ಮಣ್ಣಿನ ಸಂಗ್ರಹ ಹೆಚ್ಚುವರಿಯಾಗಿ ಮಳೆಯ ನೀರು ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ ನೇತೃತ್ವದಲ್ಲಿ ಸೇತುವೆಯ ಎರಡೂ ಕಡೆಗಳಲ್ಲಿ ಸಂಗ್ರಹವಾಗಿದ್ದ ಮಣ್ಣನ್ನು ಸಿಬ್ಬಂದಿಗಳ ಮೂಲಕ ತೆಗೆದು ಹಾಕಲಾಗುತ್ತಿದೆ.