ಚೆಟ್ಟಳ್ಳಿ, ಏ. ೩೦: ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಈ ವಾರ ಸುರಿದ ಚದುರಿದ ಮುಂಗಾರು ಪೂರ್ವಮಳೆ ತಂಪೆರೆದರಿAದಾಗಿ ಮರಗಿಡಗಳೆಲ್ಲ ಚಿಗುರೊಡೆಯುತ್ತಾ ಉದ್ಯಾನಕ್ಕೆ ಜೀವಕಳೆ ಬಂದAತಾಗಿz.ೆ

ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಹಲವು ವನ್ಯಜೀವಿಗಳ ತಾಣವಾಗಿದೆ. ವನ್ಯಪ್ರೇಮಿ, ಪ್ರಕೃತಿ ಅಭಿಮಾನಿಗಳು, ವನ್ಯಜೀವಿ ಛಾಯಾ ಗ್ರಾಹಕರು ಹಾಗೂ ಪ್ರವಾಸಿಗರು ನಿತ್ಯವೂ ಜಂಗಲ್ ಸಫಾರಿಯ ಮೂಲಕ ಹುಲಿ, ವನ್ಯಜೀವಿ ಹಾಗೂ ಉದ್ಯಾನವನ್ನು ವೀಕ್ಷಿಸಲು ಆಕರ್ಷಣೀಯ ಕೇಂದ್ರವಾಗಿದೆ.

ಆದರೆ ಕಳೆದ ಮೂರು ತಿಂಗಳಿನಿAದ ಬಿಸಿಲಿನಿಂದ ಅರಣ್ಯದೊಳಗಿನ ಕೆರೆಕಟ್ಟೆಗಳು ದಿನದಿಂದ ದಿನಕ್ಕೆ ಬರಿದಾಗ ತೊಡಗಿ ಗಿಡಬಳ್ಳಿಗಳು ಒಣಗಿದವು. ಕೆಲವು ಹಡ್ಲು ಪ್ರದೇಶಗಳಲ್ಲಿ ಮಾತ್ರ ವನ್ಯಜೀವಿಗಳಿಗೆ ಮೇವು ದೊರಕುತಿದ್ದವು. ಮಳೆಯಿಂದಾಗಿ ಅರಣ್ಯದೊಳಗಿನ ಮರಗಳು ಹಸಿರಾಗಿ ಕುರುಚಲು ಗಿಡಗಳು ಚಿಗುರೊಡೆಯ ತೊಡಗಿವೆ. ಅರಣ್ಯದೊಳಗೆ ಬೆಂಕಿ ಹರಡದಂತೆ ರಸ್ತೆಯ ಇಕ್ಕೆಲಗಳಲ್ಲಿ ಕಾಡು ಕಡಿದು ಬೆಂಕಿ ರೇಖೆಯನ್ನು ಮಾಡಲಾದ ಜಾಗದಲ್ಲಿ ಹಾಗೂ ಸಫಾರಿ ತೆರಳುವ ಜಾಗದಲ್ಲಿ ಕಡಿಯಲಾದ ವ್ಯೂವ್‌ಲೈನ್‌ಗಳಲೆಲ್ಲ ಕುರುಚಲು ಹುಲ್ಲುಗಳು ಚಿಗುರೊಡೆಯುತ್ತಿದ್ದು ಜಿಂಕೆಯ ಹಿಂಡು, ಕಾಡೆಮ್ಮೆ, ಕಾಡಾನೆಗಳ ಸಾಲು, ಕಡವೆ, ಕಾಡುಹಂದಿಗಳು ನವಿಲು ಸೇರಿದಂತೆ ವಿವಿಧ ಪಕ್ಷಿಗಳು ರಸ್ತೆ ಬದಿಗಳಲ್ಲಿ ಕಂಡು ಬರತೊಡಗಿವೆ.

ಕಾಡ್ಗಿಚ್ಚು ನಿಯಂತ್ರಣಕ್ಕೆ ಮುಂಗಾರು ಪೂರ್ವ ಮಳೆ ಸಹಕಾರಿ...

ಬೇಸಿಲ ಬೇಗೆ ಬಂತೆAದರೆ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹರಸಾಸಹ ಪಡಬೇಕಿದೆ. ಕೆಲವೆಡೆ ಅರಣ್ಯಗಳು ಬೆಂಕಿಗೆ ತುತ್ತಾಗುತ್ತಿದೆ.À ಇದೀಗ ಸುರಿದ ಮುಂಗಾರು ಪೂರ್ವ ಮಳೆ ಕಾಡ್ಗಿಚ್ಚು ನಿಯಂತ್ರಣಕ್ಕೆ ಒಂದಷ್ಟು ಸಹಕಾರಿಯಾಗಿದೆ.

- ವರದಿ: ಪುತ್ತರಿರ ಕರುಣ್ ಕಾಳಯ್ಯ, ಫೋಟೊ: ಕುಂಞAಗಡ ಮಾಚಯ್ಯ