ಮಡಿಕೇರಿ, ಏ. ೩೦: ಕೊಡಗು ಗೌಡ ಫುಟ್ಬಾಲ್ ಅಸೋಸಿಯೇಷನ್ ಮತ್ತು ಪಾಣತ್ತಲೆ ಕುಟುಂಬಸ್ಥರ ಸಹಯೋಗದೊಂದಿಗೆ ಮರಗೋಡು ಸ.ಮಾ.ಪ್ರಾ. ಶಾಲಾ ಮೈದಾನದಲ್ಲಿ ನಡೆದ ಪಾಣತ್ತಲೆ ಕಪ್ ಫುಟ್ಬಾಲ್‌ನಲ್ಲಿ ಬೊಳ್ಳೂರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪಾಣತ್ತಲೆ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಬೊಳ್ಳೂರು ತಂಡ ಪಾಣತ್ತಲೆ ತಂಡವನ್ನು ಫೈನಲ್‌ನಲ್ಲಿ ೧-೦ ಗೋಲಿನಿಂದ ಮಣಿಸಿತು. ಮೊದಲ ಸೆಮಿಫೈನಲ್‌ನಲ್ಲಿ ಟ್ರೆöÊಬ್ರೇಕರ್‌ನಲ್ಲಿ ಬೊಳ್ಳೂರು ತಂಡ ಮುಕ್ಕಾಟಿ ತಂಡದ ವಿರುದ್ಧ ೪-೩ ಗೋಲಿನಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಪಾಣತ್ತಲೆ ತಂಡ ಕಾಂಗಿರ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಮೂರನೇ ಸ್ಥಾನವನ್ನು ಮುಕ್ಕಾಟಿರ ತಂಡ ಪಡೆದುಕೊಂಡಿತು.

ಉತ್ತಮ ಆಟಗಾರ ಪ್ರಶಸ್ತಿಯನ್ನು ಬೊಳ್ಳೂರು ತಂಡದ ಮುನ್ನ, ಬೆಸ್ಟ್ ಡಿಫೆಂಡರ್ ಕಾಂಗಿರ ಮಿಲನ್, ಉತ್ತಮ ಗೋಲ್‌ಕೀಪರ್ ಪಾಣತ್ತಲೆ ಯುನಿತ್, ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಬೊಳ್ಳೂರು ರೋಷನ್, ಬೆಸ್ಟ್ ಮಿಡ್ ಫಿಲ್ಡರ್ ಮುಕ್ಕಾಟಿ ದಿಲೀಪ್ ಬಹುಮಾನ ಪಡೆದರು.

(ಮೊದಲ ಪುಟದಿಂದ) ಉತ್ತಮ ತಂಡವಾಗಿ ಕಲ್ಲುಮುಟ್ಲು ಬಹುಮಾನ ಪಡೆದುಕೊಂಡಿತು. ಕಿರಿಯ ಆಟಗಾರನಾಗಿ ಮರದಾಳು ಯುಗನ್, ಹಿರಿಯ ಆಟಗಾರರಾಗಿ ಚೆರಿಯಮನೆ ಕುಶಾಲಪ್ಪ ಗೌರವಕ್ಕೆ ಪಾತ್ರರಾದರು. ವೀಕ್ಷಕ ವಿವರಣೆಯನ್ನು ಪರಿಚನ ಸತೀಶ್, ಬಿದ್ರುಪಣೆ ಪ್ರಸನ್ನ ನಿರ್ವಹಿಸಿದರು.

ಪಾಣತ್ತಲೆ ಸಮಿತಿ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖಜಾನೆ ಅಧಿಕಾರಿ ಪಾಣತ್ತಲೆ ನವೀನ್, ಸಾರಿಗೆ ಇಲಾಖೆ ನಿವೃತ್ತ ಅಧೀಕ್ಷಕ ಪಾಣತ್ತಲೆ ಬಿದ್ದಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣ, ಮಾಜಿ ಅಂತರರಾಷ್ಟಿçÃಯ ಫುಟ್ಬಾಲ್ ಆಟಗಾರ ಬೆಪ್ಪುರನ ಅಣ್ಣಪ್ಪ ಕುಮಾರ್, ಬೆಂಗಳೂರು ಮಹಾನಗರ ಪಾಲಿಕೆ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ, ಸುಳ್ಯದ ವಕೀಲ ಪಾಣತ್ತಲೆ ಶ್ಯಾಂಪ್ರಸಾದ್, ಚರಂಡೇಟಿ ಅಯ್ಯಪ್ಪ ಸಂಘದ ಅಧ್ಯಕ್ಷ ಪಾಣತ್ತಲೆ ನಂಜುAಡ, ಯಡವನಾಡು ಬೆಳೆಗಾರ ಪಾಣತ್ತಲೆ ಜನಾರ್ಧನ, ಮೂರ್ನಾಡು ಗೌಡ ಸಮಾಜ ಅಧ್ಯಕ್ಷ ಪಾಣತ್ತಲೆ ಹರೀಶ್, ಮಾಜಿ ಸೈನಿಕ, ಕಾವೇರಿ ಹಾಲ್ ವ್ಯವಸ್ಥಾಪಕ ದೇಲಂಪಾಡಿ ಗಣೇಶ್, ದಾನಿ ದಿವ್ಯ ಮಂಥರ್ ಗೌಡ ಪಾಲ್ಗೊಂಡಿದ್ದರು.

ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನಕ್ಕೆ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನಿಗೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ, ಇದಲ್ಲದೆ, ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸುವ ನಾಲ್ಕು ತಂಡಗಳಿಗೆ ತಲಾ ರೂ. ೫ ಸಾವಿರ ನಗದು ಬಹುಮಾನ ನೀಡಲಾಯಿತು.