ಕರ್ನಾಟಕವನ್ನು ನಂ. ೧ ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶ : ಮೋದಿ

ಬೆಂಗಳೂರು, ಏ. ೩೦: ಕರ್ನಾಟಕವನ್ನು ನಂ.೧ ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ಕಾಂಗ್ರೆಸ್-ಜೆಡಿಎಸ್'ನಿAದ ಅದು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿದ ಅವರು, ಬಿಜೆಪಿ ಸಮಾವೇಶದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ಚಿನ್ನದ ನಾಡು ಕೋಲಾರದಲ್ಲಿ ಜನರು ಸೇರಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಿದ್ದೆಗೆಡಿಸುತ್ತದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಅಡ್ಡಿಯುಂಟು ಮಾಡುತ್ತಿದ್ದು, ಸಾರ್ವಜನಿಕರು ಈ ಪಕ್ಷಗಳನ್ನು ಕ್ಲೀನ್ ಬೌಲ್ಡ್ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭ್ರಷ್ಟ ಸರಕಾರದಿಂದ ಕರ್ನಾಟಕದ ಜನತೆಯನ್ನು ರಕ್ಷಿಸಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಿದರು. ಈ ಬಾರಿಯ ಚುನಾವಣೆ ಬರೀ ಶಾಸಕರ ಆಯ್ಕೆ, ಮುಖ್ಯಮಂತ್ರಿ ಮಾಡುವ ಚುನಾವಣೆಯಷ್ಟೇ ಅಲ್ಲ. ಮುಂದಿನ ೨೫ ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ. ಅಸ್ತಿರ ಸರ್ಕಾರವಿದ್ದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅಸ್ತಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡೋಣ ಎಂದು ತಿಳಿಸಿದರು. ದಶಕದಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿಗೆ ನೀಡುವ ನಿಮ್ಮ ಒಂದು ಮತದಿಂದ ಸಾಕಷ್ಟು ಬದಲಾವಣೆಗಳಾಗುತ್ತವೆ. ಬಹುಮತದ ಒಂದು ಸರ್ಕಾರ ಅಧಿಕಾರಕ್ಕೆ ಬಂದರೇ ಸಾಕಷ್ಟು ಬದಲಾವಣೆಯಾಗುತ್ತದೆ. ನಮ್ಮ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಕ್ಕಿದೆ. ಕೊರೊನಾ ಕಾಲದಲ್ಲಿ ನಾವು ಮಾಡಿದ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ವ್ಯಾಕ್ಸಿನೇಷನ್ ಮೂಲಕ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ ಎಂದರು. ಕರ್ನಾಟಕವನ್ನು ನಂ.೧ ರಾಜ್ಯವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಡಬಲ್ ಇಂಜಿನ್ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ಧಿಯಾಗುತ್ತದೆ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್‌ನAತಹ ಗುಜರಿ ಇಂಜಿನ್‌ನಿAದ ಅಭಿವೃದ್ಧಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ

ಮೈಸೂರು, ಏ. ೩೦: ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸರಣಿ ಪ್ರಚಾರ ಸಮಾವೇಶ, ರೋಡ್ ಶೋಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರನ್ನು ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದ ಪ್ರಧಾನಿ ಮೋದಿ ಇಂದು ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ನಗರದ ವಿದ್ಯಾಪೀಠದಿಂದ ತೆರೆದ ವಾಹನದಲ್ಲಿ ನಡೆದ ಮೋದಿ ರೋಡ್ ಶೋಗೆ ಭಾರೀ ಜನಸ್ತೋಮವೇ ನೆರೆದಿತ್ತು. ರಸ್ತೆಯ ಇಕ್ಕೆಲ್ಲಗಳಲ್ಲಿ ಕಿಕ್ಕಿರಿದು ತುಂಬಿದ ಜನರು, ಮೋದಿ ಮೋದಿ ಘೋಷಣೆ ಮೊಳಗಿಸುತ್ತಾ ತೆರೆದ ವಾಹನದ ಮೇಲೆ ಹೂಮಳೆ ಸುರಿದರು. ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಸ್.ಎ. ರಾಮದಾಸ್ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೆರೆದ ವಾಹನದಲ್ಲಿದ್ದು, ಮೋದಿ ಅವರಿಗೆ ಸಾಥ್ ನೀಡಿದರು.

ಲುಧಿಯಾನದಲ್ಲಿ ಅನಿಲ ಸೋರಿಕೆ: ೧೧ ಮಂದಿ ಸಾವು

ಲುಧಿಯಾನ, ಏ. ೩೦: ಪಂಜಾಬ್ ರಾಜ್ಯದ ಲುಧಿಯಾನಾದ ಗಿಯಾಸ್‌ಪುರ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದ್ದು, ಪರಿಣಾಮ ಕನಿಷ್ಟ ೧೧ ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳವನ್ನು ಸೀಲ್ ಮಾಡಿದ್ದಾರೆ. ಅಲ್ಲದೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುವಾ ರಸ್ತೆಯಲ್ಲಿ ಕಾರ್ಖಾನೆಯಿದ್ದು, ಇಂದು ಬೆಳಿಗ್ಗೆ ೭.೩೦ರ ಸುಮಾರಿಗೆ ಅನಿಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸ್ಥಳವನ್ನು ಸೀಲ್ ಮಾಡಿರುವ ಪೊಲೀಸರು, ಸ್ಥಳ ಪ್ರವೇಶಿಸದಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಇನ್ನೂ ೧೦ ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈತನ್ಮಧ್ಯೆ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. "ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಕಾರ್ಖಾನೆಯ ಅನಿಲ ಸೋರಿಕೆ ಘಟನೆಯು ಬಹಳ ನೋವುಂಟು ಮಾಡಿದೆ. ಪೊಲೀಸ್, ಸರ್ಕಾರ ಮತ್ತು ಎನ್‌ಡಿಆರ್‌ಎಫ್ ಪಡೆಗಳು ಸ್ಥಳದಲ್ಲಿದ್ದು, ಅಗತ್ಯ ನೆರವುಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಕೆಲವರು ರಸ್ತೆಯ ಮೇಲೆ ಶವವಾಗಿ ಬಿದ್ದಿರುವುದು ಕಂಡುಬAದಿದೆ ಎಂದು ತಿಳಿಸಿವೆ. ಘಟನೆ ಕಂಡ ಸ್ಥಳೀಯರು ಭೀತಿಗೊಳಗಾಗಿದ್ದು, ಮನೆಗಳನ್ನು ತೊರೆಯುತ್ತಿದ್ದಾರೆಂದು ತಿಳಿದುಬಂದಿದೆ.

ಡೋರ್‌ಬೆಲ್ ಬಾರಿಸಿ ತಮಾಷೆ: ಅಮೆರಿಕದಲ್ಲಿ ಮೂವರು ಬಾಲಕರನ್ನು ಹತ್ಯೆ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿ ತಪ್ಪಿತಸ್ಥ!

ಕ್ಯಾಲಿಫೋರ್ನಿಯಾ, ಏ. ೩೦: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ತನ್ನ ಮನೆಯಲ್ಲಿ ಡೋರ್‌ಬೆಲ್ ಬಾರಿಸಿ ತಮಾಷೆ ಮಾಡಿದ ಮೂವರು ಹದಿಹರೆಯದ ಹುಡುಗರನ್ನು ಕೊಂದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಪ್ಪಿತಸ್ಥರೆಂದು ಸಾಬೀತಾಗಿದೆ. ೨೦೨೦ರಲ್ಲಿ ಅನುರಾಗ್ ಚಂದ್ರ ಎಂಬ ಭಾರತೀಯನ ಮನೆಯಲ್ಲಿ ಕೆಲವು ಕಿಡಿಗೇಡಿ ಹುಡುಗರು ಡೋರ್ ಬೆಲ್ ಬಾರಿಸಿದರು. ಈ ವಿಚಾರವಾಗಿ ಆತ ಮೂವರು ಅಪ್ರಾಪ್ತರನ್ನು ಕಾರಿನಿಂದ ಡಿಕ್ಕಿ ಹೊಡೆದು ಕೊಂದಿದ್ದ. ಈ ಘಟನೆಯಲ್ಲಿ ಇಬ್ಬರು ಹದಿಹರೆಯದವರೂ ಗಾಯಗೊಂಡಿದ್ದರು. ಘಟನೆಯ ದಿನ ತಾನು ಹನ್ನೆರಡು ಬಿಯರ್‌ಗಳನ್ನು ಕುಡಿದಿದ್ದಾಗಿ ಸ್ವತಃ ಭಾರತೀಯ ಮೂಲದ ಅಪರಾಧಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದನು. ಡಿಕ್ಕಿಯಾಗುವ ಮೊದಲು ನಾನು ೧೫೯ ಕಿ.ಮೀ. ವೇಗದಲ್ಲಿ ಚಾಲನೆ ಮಾಡುತ್ತಿದ್ದೆ. ಆದರೂ ನನ್ನ ಗುರಿ ಅವರನ್ನು ಹತ್ಯೆ ಮಾಡುವುದು ಆಗಿರಲಿಲ್ಲ. ಅವರಿಗೆ ಪಾಠ ಕಲಿಸುವುದಾಗಿತ್ತು ಎಂದು ಹೇಳಿದ್ದನು. ಡೋರ್ ಬೆಲ್ ಬಾರಿಸುತ್ತಿದ್ದರಿಂದ ನನಗೆ ವಿಪರೀತ ಸಿಟ್ಟು ಬಂತು. ಇದರಿಂದಾಗಿ ಬಾಲಕರನ್ನು ಹಿಂಬಾಲಿಸಿದೆ. ಆದರೆ ಸಕಾಲಕ್ಕೆ ಕಾರಿನ ಬ್ರೇಕ್ ಹಾಕಲಾಗದೆ ಈ ಅಪಘಾತ ಸಂಭವಿಸಿತ್ತು ಎಂದು ಹೇಳಿದ್ದನು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಿವರ್‌ಸೈಡ್ ಕೌಂಟಿ ಜಿಲ್ಲಾ ಅಟಾರ್ನಿ ಮೈಕ್ ಹೆಸ್ಟ್ರಿನ್, ಈ ಬಾಲಕರ ಹತ್ಯೆಯು ನಮ್ಮ ಸಮುದಾಯಕ್ಕೆ ಭಯಾನಕ ಮತ್ತು ಅರ್ಥಹೀನ ದುರಂತವಾಗಿದೆ ಎಂದು ಹೇಳಿದ್ದರು. ಈ ರೀತಿಯ ಹುಚ್ಚುತನವನ್ನು ಸಹಿಸಲು ಸಾಧ್ಯವಿಲ್ಲ. ಇದೊಂದು ಪೂರ್ವಯೋಜಿತ ಕೊಲೆ ಎಂದು ಹೇಳಿತ್ತು.