ಮಡಿಕೇರಿ, ಏ. ೨೮: ಬಹುಜನ ಸಮಾಜ ಪಕ್ಷದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿವಿಲ್ ಕುಮಾರ್ ಆಟ್ರಂಗಡ ಇಂದು ಮಡಿಕೇರಿಯಲ್ಲಿ ಮತಯಾಚನೆ ಮಾಡಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಭೀಮಪುತ್ರಿ ರೇವತಿರಾಜ್, ಉಪಾಧ್ಯಕ್ಷೆ ಪೂವಣ್ಣಿ, ಬೆಳ್ಯಪ್ಪ, ಕಾರ್ಯಕರ್ತರಾದ ರವಿ, ಗುರು, ಲಿಂಶ, ಜಯರಾಜ್, ಸರತಂಗಮ್ಮ ಇತರರು ಪಾಲ್ಗೊಂಡಿದ್ದರು.