ಪ್ರಚಾರ ವೇಳೆ ಕಲ್ಲು ತೂರಾಟ: ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತಲೆಗೆ ಗಾಯ

ಕೊರಟಗೆರೆ, ಏ. ೨೮: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವAತೆಯೇ ಪ್ರಚಾರದ ಕಣ ತಾರಕಕ್ಕೇರಿದ್ದು, ಕೆಲವು ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅವರ ತಲೆಗೆ ಗಾಯವಾಗಿ ರಕ್ತ ಸೋರಿಕೆಯಾಗಿದೆ. ತಾಲೂಕಿನ ಭೈರೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆಯಲ್ಲಿ ಡಾ. ಜಿ. ಪರಮೇಶ್ವರ್ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಕುಣಿಯುತ್ತಿದ್ದಾಗ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಕೂಡಲೇ ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ದ್ವೇಷ ಭಾಷಣ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ನಿರ್ದೇಶನ

ನವದೆಹಲಿ, ಏ. ೨೮: ದೂರಿಲ್ಲದೇ ಹೋದರೂ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿ ಎಂದು ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ನಿರ್ದೇಶನ ನೀಡಿದೆ. ೨೦೨೨ರ ಆದೇಶದ ವ್ಯಾಪ್ತಿಯನ್ನು ಮೂರು ರಾಜ್ಯಗಳ ಆಚೆಗೂ ವಿಸ್ತರಿಸಿರುವ ಸುಪ್ರೀಂ ಕೋರ್ಟ್ ಯಾವುದೇ ದೂರು ನೀಡದಿದ್ದರೂ ದ್ವೇಷದ ಭಾಷಣ ಮಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠವು ದ್ವೇಷ ಭಾಷಣಗಳನ್ನು "ದೇಶದ ಜಾತ್ಯತೀತ ರಚನೆಯ ಮೇಲೆ ಪರಿಣಾಮ ಬೀರುವ ಗಂಭೀರ ಅಪರಾಧ" ಎಂದು ಬಣ್ಣಿಸಿದ್ದು, ೨೦೨೨ ರ ಅಕ್ಟೋಬರ್ ೨೧ ರ ಆದೇಶವು ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಮತ್ತು ಪ್ರಕರಣಗಳನ್ನು ದಾಖಲಿಸುವಲ್ಲಿ ಯಾವುದೇ ವಿಳಂಬವನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಪೀಠವು ಎಚ್ಚರಿಸಿದೆ. "ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ನಾವು ಧರ್ಮವನ್ನು ಯಾವುದಕ್ಕೆ ಇಳಿಸಿದ್ದೇವೆ ಎಂಬುದು ನಿಜಕ್ಕೂ ದುರಂತ" ಎಂದ ಸುಪ್ರೀಂ ಕೋರ್ಟ್, ಭಾರತದ ಸಂವಿಧಾನವು ಜಾತ್ಯತೀತ ರಾಷ್ಟçವನ್ನು ಕಲ್ಪಿಸುತ್ತದೆ. ದೂರು ದಾಖಲಾಗುವವರೆಗೆ ಕಾಯದೆ ಅಪರಾಧಿಗಳ ವಿರುದ್ಧ ತ್ವರಿತವಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವಂತೆ ಸೂಚಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆ: ಇಂದಿನಿAದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭ

ಬೆAಗಳೂರು, ಏ. ೨೮: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೇ ೧೦ ರಂದು ಚುನಾವಣೆಗೆ ಮತದಾನ ನಡೆಯಲಿದೆ. ಎರಡು ದಿನಗಳ ಬಳಿಕ ಅಂದರೆ ಮೇ ೧೩ಕ್ಕೆ ಫಲಿತಾಂಶ ಹೊರಬೀಳಲಿದೆ. ೨೦೨೩ನೇ ಸಾಲಿನ ಸಾರ್ವತ್ರಿಕ ಚುನಾವಣೆಗೆ ಮತದಾನ ತಾ. ೨೯ ರಿಂದ ಆರಂಭವಾಗಲಿದೆ. ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭವಾಗಲಿದ್ದು, ತಾ. ೨೯ ರಿಂದ ಮೇ ೬ ರವರೆಗೆ ಬ್ಯಾಲೆಟ್ ಮತದಾನಕ್ಕೆ ಅವಕಾಶವಿದೆ. ರಾಜ್ಯ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲೂ ಬ್ಯಾಲೆಟ್ ಪೇಪರ್ ವೋಟಿಂಗ್ ಗೆ ಅವಕಾಶ ಇದೆ. ೮೦ ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷಚೇತನರಿಗೆ ಹಾಗೂ ಚುನಾವಣೆಯಲ್ಲಿ ಭಾಗವಹಿಸುವ ಪೊಲೀಸ್, ಚುನಾವಣೆ ಸಿಬ್ಬಂದಿಗೆ ಮತದಾನಕ್ಕೆ ಅವಕಾಶ ಸಿಕ್ಕಿದೆ. ೮೦ ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ಮನೆ ಬಳಿಯೇ ಮತ ಚಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ೮೦ ವರ್ಷ ಮೇಲ್ಪಟ್ಟ ವೃದ್ಧರಿಗೆ ಚುನಾವಣಾ ಅಯೋಗದ ಸಿಬ್ಬಂದಿಗಳು ಅವರ ಮನೆ ಬಾಗಿಲಿನಲ್ಲಿಯೇ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೌಪ್ಯ ಮತ ಚಲಾಯಿಸುವಾಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಹಾಜರಾಗಲಿದ್ದಾರೆ.

ಯುದ್ಧ ಪೀಡಿತ ಸುಡಾನ್‌ನಿಂದ ೩೬೨ ಕನ್ನಡಿಗರ ಆಗಮನ

ಬೆಂಗಳೂರು, ಏ. ೨೮: ಆಂತರಿಕ ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿದ್ದ ೩೬೨ ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ. ೩೬೨ ಕನ್ನಡಿಗರನ್ನು ಭಾರತೀಯ ಸೇನಾ ವಿಮಾನದಲ್ಲಿ ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಈ ಪೈಕಿ ೫೬ ಜನ ತಮಿಳಿಗರಿದ್ದಾರೆ. ಸದ್ಯ ಸ್ಕಿçÃನಿಂಗ್, ಕೋವಿಡ್ ಟೆಸ್ಟ್ ಮಾಡಿ ವಿಳಾಸ ಪಡೆಯಲಾಗಿದೆ. ಸ್ವಗ್ರಾಮಗಳಿಗೆ ತೆರಳಲು ಕನ್ನಡಿಗರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಏರ್ಪೋಟ್‌ನಿಂದ ಅವರು ತಮ್ಮ ಊರುಗಳಿಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೈಸೂರು ಸೇರಿದಂತೆ ಹಲವಡೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಂಗ್ರೆಸ್ ದೇಶದ ಜನರ ಕ್ಷಮೆ ಕೇಳಬೇಕು: ಯಡಿಯೂರಪ್ಪ

ಕಲಬುರಗಿ, ಏ. ೨೮: ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದ ಹಾಗೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಾಗಿ ಕಾಂಗ್ರೆಸ್ ದೇಶದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತಾಡುವ ಧೈರ್ಯ ಮಾಡಿಲ್ಲ. ಆದರೆ ಖರ್ಗೆ ಈ ರೀತಿ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಒಬ್ಬ ಹಿರಿಯ ನಾಯಕ ಈ ರೀತಿ ಮಾತಾಡಬಾರದು. ಖರ್ಗೆ ಹೇಳಿಕೆಯನ್ನು ಜನ ಕ್ಷಮಿಸಬಹುದು. ದೇವರಂತೂ ಕ್ಷಮಿಸುವುದಿಲ್ಲ. ಅವರ ಹೇಳಿಕೆ ಯಾರಿಗೂ ಶೋಭೆ ತರುವಂತಹದಲ್ಲ. ನಿಂತಲ್ಲಿ ಕುಳಿತಲ್ಲಿ ಅವರ ಮಾತಿನ ಬಗ್ಗೆ ಚರ್ಚೆ ಆಗುತ್ತಿದೆ ಖರ್ಗೆ ಪರವಾಗಿ ಕಾಂಗ್ರೆಸ್ ಇಡೀ ದೇಶದ ಜನರ ಕ್ಷಮೆ ಕೋರಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.

ನನ್ನ ಮಗಳು ತನ್ನ ಗಂಡನನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ: ಸುಧಾ ಮೂರ್ತಿ

ಲಂಡನ್, ಏ. ೨೮: ತಮ್ಮ ಮಗಳು ಅಕ್ಷತಾ ಮೂರ್ತಿ ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸುಧಾ ಮೂರ್ತಿಯವರು ತಮ್ಮ ಮಗಳಿಂದಾಗಿ ರಿಷಿ ಸುನಕ್ ಯುಕೆಯ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ನಾನು ನನ್ನ ಪತಿಯನ್ನು ಉದ್ಯಮಿ ಮಾಡಿದ್ದೇನೆ, ನನ್ನ ಮಗಳು ಆಕೆಯ ಪತಿಯನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಇದೆಲ್ಲದಕ್ಕೂ ಕಾರಣ ಹೆಂಡತಿಯ ಮಹಿಮೆ. ಹೆಂಡತಿ ಗಂಡನನ್ನು ಹೇಗೆಲ್ಲಾ ಬದಲಾಯಿಸಬಹುದು ಎಂಬುದನ್ನು ನೋಡಿ. ಆದರೆ, ನನ್ನ ಗಂಡನನ್ನು ನಾನು ಬದಲಾಯಿಸಲು ಸಾಧ್ಯವಾಗಲಿಲ್ಲ. ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ ಮತ್ತು ನನ್ನ ಮಗಳು ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ ಎಂದು ಸುಧಾ ಮೂರ್ತಿ ಹೇಳಿರುವುದನ್ನು ಇನ್‌ಸ್ಟಾಗ್ರಾಂ ಪೋಸ್ಟ್ನಲ್ಲಿ ಕಾಣಬಹುದಾಗಿದೆ.