ಮಡಿಕೇರಿ, ಏ. ೨೯: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ಮತಯಾಚಿಸುವ ನಿಟ್ಟಿನಲ್ಲಿ ಬಿಜೆಪಿಯ ಮಾಜಿ ರಾಷ್ಟಿçÃಯ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಂದು ಮಡಿಕೇರಿಯಲ್ಲಿ ರೋಡ್ ಶೋ ನಡೆಸಿದರು.
ಹೆಲಿಕಾಪ್ಟರ್ ಮೂಲಕ ನಗರದ ಹೊರ ವಲಯದಲ್ಲಿರುವ ಗಾಲ್ಫ್ ಮೈದಾನದ ಹೆಲಿಪ್ಯಾಡ್ಗೆ ಬಂದಿಳಿದ ಅಮಿತ್ ಶಾ ಅಲ್ಲಿಂದ ಕಾರಿನ ಮೂಲಕ ಚೌಡೇಶ್ವರಿ ದೇವಾಲಯಕ್ಕೆ ಆಗಮಿಸಿದರು. ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಪ್ರತಾಪ್ ಸಿಂಹ ಮತ್ತಿತರರು ಇದ್ದರು. ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅರ್ಚಕ ಸತ್ಯೇಶ್ ಭಟ್ ಪೂಜೆ ನಿರ್ವಹಿಸಿ ಪ್ರಸಾದ ನೀಡಿದರು. ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಮಿತ್ ಶಾ ಅವರಿಗೆ ಪಕ್ಷದ ಪರವಾಗಿ ಕೊಡಗಿನ ಪೇಟ ತೊಡಿಸಿದರು. ಇದಾದ ಬಳಿಕ ಬಿಜೆಪಿಯ ಪ್ರಚಾರ ವಾಹನವನ್ನು ಏರಿದ ಅಮಿತ್ ಶಾ, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರುಗಳೊಂದಿಗೆ ಚೌಡೇಶ್ವರಿ ದೇವಾಲಯದಿಂದ ಹಳೆಯ ಖಾಸಗಿ ಬಸ್ ನಿಲ್ದಾಣ ದವರೆಗೆ ಬಿಜೆಪಿಯ ಪ್ರಚಾರ ವಾಹನದಲ್ಲಿ ಬಿಜೆಪಿ ಕಾರ್ಯಕರ್ತರತ್ತ, ಸಾರ್ವಜನಿಕರತ್ತ ಕೈ ಬೀಸಿ ನಮಸ್ಕರಿಸುತ್ತಾ, ರೋಡ್ ಶೋ ನಡೆಸಿದರು. ಬಿಜೆಪಿ ಬಾವುಟ ಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಜಯಘೋಷ ಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಅರ್ಧದಲ್ಲೇ ತೆರಳಿದ ಅಮಿತ್ ಶಾ
ಚೌಡೇಶ್ವರಿ ದೇವಾಲಯದಿಂದ ಆರಂಭವಾದ ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ ಅವರು ಹಳೆಯ ಖಾಸಗಿ ಬಸ್ ನಿಲ್ದಾಣ ಅಥವಾ
(ಮೊದಲ ಪುಟದಿಂದ) ಜನರಲ್ ತಿಮ್ಮಯ್ಯ ವೃತ್ತದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎನ್ನಲಾಗಿತ್ತಾದರೂ, ರೋಡ್ ಶೋ ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ತಲುಪಿದ ವೇಳೆ ಉಡುಪಿಯಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ತಡವಾದ ಹಿನ್ನೆಲೆಯಲ್ಲಿ ಪ್ರಚಾರ ವಾಹನದಿಂದ ಇಳಿದ ಅಮಿತ್ ಶಾ ಅಲ್ಲಿಂದಲೇ ಹಿಂತಿರುಗಿದರು. ಇದರಿಂದಾಗಿ ಅಮಿತ್ ಶಾ ಅವರ ಭಾಷಣಕ್ಕಾಗಿ ಕಾಯುತ್ತಿದ್ದವರು ನಿರಾಸೆಗೆ ಒಳಗಾದರು. ಅಮಿತ್ ಶಾ ತೆರಳಿದ ಬಳಿಕ ಪ್ರಚಾರ ವಾಹನದಲ್ಲಿ ಜಿ.ಟಿ. ವೃತ್ತದವರೆಗೆ ಸಾಗಿದ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಅಭಿವೃದ್ಧಿ ಆಧಾರದಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಕೊಡಗಿನಲ್ಲಿ ಜನಸೇವೆಗೆ ಅವಕಾಶ ನೀಡಬೇಕೆಂದು ಅವರುಗಳು ಮನವಿ ಮಾಡಿದರು.
ರೋಡ್ ಶೋ ನಲ್ಲಿ ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಮಾಜಿ ಎಂ.ಎಲ್.ಸಿ.ಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ವಕ್ತಾರ ಮಹೇಶ್ ಜೈನಿ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೀನಾ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
‘ಟೈಟ್ ಸೆಕ್ಯೂರಿಟಿ’
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸಂಪೂರ್ಣ ಮಡಿಕೇರಿ ನಗರ ಪೊಲೀಸ್ ಸರ್ಪಗಾವಲಿನಲ್ಲಿತ್ತು. ಪ್ರಮುಖ ಬೀದಿಗಳು, ಗಲ್ಲಿ ಗಲ್ಲಿಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪೊಲೀಸರು ಮಾತ್ರವಲ್ಲದೆ, ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ, ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್, ಜಿಲ್ಲಾ ಸಶಸ್ತç ದಳ, ಜಿಲ್ಲಾ ಹಾಗೂ ರಾಜ್ಯ ಗುಪ್ತದಳ, ಬಾಂಬ್ ನಿಷ್ಕಿçಯ ದಳ, ಶ್ವಾನದಳ ಸಿಬ್ಬಂದಿಗಳು ಸೇರಿದಂತೆ ಸುಮಾರು ೬೦೦ಕ್ಕೂ ಅಧಿಕ ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ವಿಶೇಷ ಭದ್ರತಾ ಪಡೆಯ ಕಮಾಂಡೆAಟ್ ಸುಧೀರ್ ಚೌಹಾಣ್, ಅಸಿಸ್ಟೆಂಟ್ ಕಮಾಂಡೆAಟ್, ಮಹೇಶ್, ಐಜಿಪಿ ಪ್ರವೀಣ್ ಮಧುಕರ್ ಪವಾರ್, ಎಸ್ಪಿ ರಾಮರಾಜನ್, ಎಎಸ್ಪಿ ಸುಂದರ್ರಾಜ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಚೌಡೇಶ್ವರಿ ದೇವಾಲಯಕ್ಕೆ ಅಮಿತ್ ಶಾ ಅವರು ಆಗಮಿಸುತ್ತಿದ್ದಂತೆ ದೇವಾಲಯದ ಆವರಣ ಸಂಪೂರ್ಣವಾಗಿ ಭದ್ರತಾ ಪಡೆಗಳ ಹಿಡಿತದಲ್ಲಿತ್ತು. ಪೇಟ, ಪೂಜಾ ಸಾಮಗ್ರಿ, ಹೂಹಾರ ಸೇರಿದಂತೆ ರೋಡ್ ಶೋಗೆ ಬಳಸಲಾಗಿದ್ದ ವಾಹನಗಳನ್ನೂ ಕೂಡ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆಗೆ ಒಳಪಡಿಸಿದ್ದರು. ಬೆಳಿಗ್ಗೆ ೧೧.೪೫ಕ್ಕೆ ಅಮಿತ್ ಶಾ ನಗರಕ್ಕೆ ಆಗಮಿಸಲಿದ್ದಾರೆ ಎಂದು ಸಮಯ ನಿಗದಿಯಾಗಿತ್ತಾದರೂ ಅಮಿತ್ ಶಾ ಅವರು ಭೇಟಿ ನೀಡುವಾಗ ಒಂದು ಗಂಟೆ ತಡವಾಗಿತ್ತು. ಮಧ್ಯಾಹ್ನ ಸುಮಾರು ೧.೨೦ರ ವೇಳೆಗೆ ನಗರದಿಂದ ಹಿಂತಿರುಗಿದರು. ಅಲ್ಲಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ತಾತ್ಕಾಲಿಕ ತಡೆಯೊಡ್ಡಿದ್ದುದರಿಂದ ವಾಹನ ಚಾಲಕರು ಬದಲೀ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದುದು ಗೋಚರಿಸಿತು.