ಗೋಣಿಕೊಪ್ಪ ವರದಿ, ಏ. ೨೮: ಅಖಿಲ ಅಮ್ಮಕೊಡವ ಸಮಾಜ ಮತ್ತು ಅಮ್ಮತ್ತೀರ ಕುಟುಂಬ ಸಹಯೋಗದಲ್ಲಿ ತಾ. ೨೯ ರಿಂದ ಮೇ ೧ ರವರೆಗೆ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮತ್ತೀರ ಕ್ರಿಕೆಟ್ ನಮ್ಮೆ ಆಯೋಜಿಸಲಾಗಿದೆ. ೨೪ ತಂಡಗಳು ಭಾಗವಹಿಸಲಿವೆ.
ಬೆಳಿಗ್ಗೆ ೯ ಗಂಟೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಬೆ. ೧೦ ಗಂಟೆಗೆ ಕರ್ನಾಟಕ ಹಾಕಿ ಮಾಜಿ ಆಟಗಾರ ಅಮ್ಮತ್ತಿರ ಕವಿನ್ ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮ್ಮತ್ತಿರ ಕ್ರಿಕೆಟ್ ಕಪ್ ಅಧ್ಯಕ್ಷ ಅಮ್ಮತ್ತಿರ ಆರ್. ಪ್ರಸಾದ್, ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್. ಪ್ರಥ್ಯು, ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಕುಟುಂಬದ ಪ್ರಮುಖರಾದ ಅಮ್ಮತ್ತೀರ ಎಸ್. ರವಿರಾಜ್, ಎ.ಜಿ. ಕಾಳಮಯ್ಯ, ಎ.ಕೆ. ಅಶೋಕ್, ಎ.ಸಿ. ಚೋಂದಮ್ಮ, ಎ.ಎ. ರುಕ್ಮಿಣಿ, ಸರಸ್ವತಿ, ಸರಳ, ದಮಯಂತಿ ಪಾಲ್ಗೊಳ್ಳಲಿದ್ದಾರೆ.