ಮಡಿಕೇರಿ, ಏ. ೨೭ : ಕ್ರೀಡೆಯಲ್ಲಿ ಶಿಸ್ತು ಮುಖ್ಯವಾಗಿದ್ದು, ಇಲ್ಲಿ ಶ್ರಮಪಟ್ಟರೆ ಖಂಡಿತಾ ಪ್ರತಿಫಲ ಸಿಗಲಿದೆ ಎಂದು ರಾಷ್ಟಿçÃಯ ಡೆಕಥ್ಲಾನ್, ಹಾಕಿ ಹಾಗೂ ಕ್ರಿಕೆಟ್ ಆಟಗಾರ ಕೋದಂಡ ಪೂವಯ್ಯ ಹೇಳಿದರು.
ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಧನೆ ಮಾಡಲು ಯಾವದೇ ಮಿತಿ ಇರುವದಿಲ್ಲ, ಕಷ್ಟಪಟ್ಟರೆ ಪ್ರಯೋಜನ ಸಿಗಲಿದೆ. ಕ್ರೀಡೆಯಲ್ಲಿ ಶ್ರಮಪಟ್ಟರೆ ಯಶಸ್ಸು ಸಿಗಲಿದೆ. ಕ್ರೀಡಾಪಟುಗಳಿಗೆ ದೈಹಿಕ ಸಾಮರ್ಥ್ಯ ಇರಬೇಕು. ಮೇಲಾಟಗಳಲ್ಲಿ(ಅಥ್ಲೆಟಿಕ್) ತೊಡಗಿಸಿಕೊಂಡವರಿಗೆ ಯಾವದೇ ಕ್ರೀಡೆಯಲ್ಲೂ ಭಾಗವಹಿಸಬಹುದು. ಮೇಲಾಟಗಳು ಕ್ರೀಡೆಯ ತಾಯಿ ಇದ್ದಂತೆ ಎಂದು ಹೇಳಿದರು. ಇದು ನಿಮಗಳಿಗೆ ಕಲಿಯಲು ಸರಿಯಾದ ಸಮಯವಾಗಿದ್ದು, ನಿಮ್ಮ ತರಬೇತುದಾರರು ಹೇಳಿಕೊಡುವದನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳಬೇಕು. ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದಲ್ಲಿ ಏನನ್ನೂ ಸಾಧಿಸಲಾಗದು. ಎಲ್ಲರಲ್ಲೂ ಪ್ರತಿಭೆ ಇರುತ್ತದೆ, ಅದನ್ನು ಹೊರಗೆಡಹಲು ಇದು ಸದವಕಾಶವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.
ಮಕ್ಕಳು ಕುರುಕಲು ಆಹಾರವನ್ನು ಸೇವಿಸದೇ ಮನೆಯಲ್ಲಿ ಮಾಡಿಕೊಡುವ ಪೌಷ್ಠಿಕ ಆಹಾರ, ಹಣ್ಣು ಮುಂತಾದುವುಗಳನ್ನು ಸೇವಿಸಬೇಕು. ಯಾವದೇ ಕ್ಷೇತ್ರದಲ್ಲಾಗಲೀ ಸಿಕ್ಕ ಅವಕಾಶದಲ್ಲಿ ಜೀವನವನ್ನು ಆನಂದಿಸುವAತೆ ಕಿವಿಮಾತು ಹೇಳಿದರು.
ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರು, ಪೋಷಕರು ಇದ್ದರು.