ಪೊನ್ನಂಪೇಟೆ, ಏ. ೨೭: ವಕೀಲರ ಸಂಘದ ಅಧ್ಯಕ್ಷರಾಗಿ ಕಳಕಂಡ ಡಿ. ಮುತ್ತಪ್ಪ ಪುನರಾಯ್ಕೆಗೊಂಡರು. ಇತ್ತೀಚೆಗೆ .... ಸ್ಥಾನಕ್ಕೆ ಚುನಾವಣೆ ನಡೆಯಿತು. ಪ್ರತೀ ೨ ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷರಾಗಿದ್ದ ಕಳಕಂಡ ಡಿ. ಮುತ್ತಪ್ಪನವರೆ ಮತ್ತೆ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಅಜ್ಜಮಾಡ ಮೋನಿ ಪೊನ್ನಪ್ಪ ಚುನಾಯಿತಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮತ್ರಂಡ ಸಿ. ಪೂವಣ್ಣ, ಜಂಟಿ ಕಾರ್ಯದರ್ಶಿಯಾಗಿ ಬೇರೇರ ಸೂರಜ್ ಮುತ್ತಣ್ಣ, ಖಜಾಂಚಿಯಾಗಿ ಬಾನಂಗಡ ವಿನೋದ್, ನಿರ್ದೇಶಕರಾಗಿ ಬಿ.ಯು. ಪ್ರತಿಷ್ಠಾ, ಹೆಚ್.ಜಿ. ದಿನೇಶ್, ಎಂ.ಹೆಚ್. ರಫೀಕ್, ಎ.ಜಿ. ಕಲ್ಪನಾ ಆಯ್ಕೆಗೊಂಡಿದ್ದಾರೆ.