ಮಡಿಕೇರಿ, ಏ. ೨೭: ಹತ್ತು ಕುಟುಂಬ ೧೮ ಗೋತ್ರದ ಅರೆಭಾಷಿಕ ಗೌಡ ಕುಟುಂಬಗಳ ನಡುವೆ ಮರಗೋಡು ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಣತ್ತಲೆ ಕಪ್ ಫುಟ್ಬಾಲ್‌ನಲ್ಲಿ ಕಲ್ಲುಮುಟ್ಲು, ಬೊಳ್ಳೂರು, ಮುಕ್ಕಾಟಿ, ಮಂಞAಡ್ರ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಕಡ್ಯದ ಪಾರೇರ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಕಾಂಗೀರ ತಂಡ ಪರ್ಲಕೋಟಿ ತಂಡವನ್ನು ಟ್ರೆöÊಬ್ರೇಕರ್‌ನಲ್ಲಿ ೪-೩ ಗೋಲಿನಿಂದ ಸೋಲಿಸಿತು. ಕಡ್ಯದ ತಂಡ ಕಾನಡ್ಕ ತಂಡವನ್ನು ೩-೦ ಗೋಲಿನಿಂದ ಮಣಿಸಿತು. ಕಲ್ಲು ಮಟ್ಲು ತಂಡ ಎಡಿಕೇರಿ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ಬೊಳ್ಳೂರು ತಂಡ ಪರಿಚನ ತಂಡವನ್ನು ೨-೧ ಗೋಲಿನಿಂದ ಸೋಲಿಸಿತು. ಮುಕ್ಕಾಟಿರ ತಂಡ ಚಂಡಿರ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಮಂಞAಡ್ರ ತಂಡ ಕೊಳಂಬೆ ತಂಡವನ್ನು ೧-೦ ಗೋಲಿನಿಂದ ಮಣಿಸಿತು.