ಪೊನ್ನAಪೇಟೆ, ಏ. ೨೭: ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಗೋಣಿಕೊಪ್ಪಲು ಸಮೀಪದ ಅರುವತೊಕ್ಲು ಗ್ರಾಮದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣ ದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮದಿನವನ್ನು ಆಚರಿಸಲಾಯಿತು.

ಈ ಸಂದರ್ಭ ದ.ಸಂ.ಸ. ರಾಜ್ಯ ಸಮಿತಿ ಸದಸ್ಯ ಟಿ.ಎನ್. ಗೋವಿಂದಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಶೋಷಿತ ವರ್ಗದವರ ಆಶಾಕಿರಣ. ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದಾರೆ. ಅಂಬೇಡ್ಕರ್ ವ್ಯಕ್ತಿಯಷ್ಟೇ ಅಲ್ಲ, ಮಹಾನ್ ಶಕ್ತಿ. ಶ್ರೇಷ್ಠ ವ್ಯಕ್ತಿಯಾಗಿರುವುದರಿಂದಲೇ ವಿಶ್ವಸಂಸ್ಥೆಯ ವತಿಯಿಂದಲೂ ಅವರ ಜನ್ಮದಿನ ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅಂಬೇಡ್ಕರ್ ಅವರು ಕಾನೂನು ರೂಪದಲ್ಲಿ ನಮಗೆ ಸಂವಿಧಾನವನ್ನು ಕೊಟ್ಟು ಅಸಮಾನತೆ ಯನ್ನು ಹೋಗಲಾಡಿಸಿದ್ದಾರೆ ಎಂದರು. ದ.ಸಂ.ಸ. ಕೊಡಗು ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಅಂಬೇಡ್ಕರ್ ಅವರು ದೇಶದಲ್ಲಿ ಅತ್ಯಂತ ಉನ್ನತ ಶಿಕ್ಷಣವನ್ನು ಪಡೆದ ಮಹಾನ್ ವ್ಯಕ್ತಿ. ಪ್ರತಿಯೊಬ್ಬರೂ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಶಿಕ್ಷಣ ಒಂದೇ ಅಸಮಾನತೆಯನ್ನು ಹೋಗಲಾಡಿಸಲು ಇರುವ ಮಾರ್ಗ ಎಂದರು. ಜಿಲ್ಲಾ ಸಂಘಟನೆಯ ಖಜಾಂಚಿ ಕುಮಾರ್ ಮಹದೇವ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಜಿಲ್ಲಾ ದ.ಸಂ.ಸ. ಮಹಿಳಾ ಸಂಚಾಲಕಿ ಲಕ್ಷಿö್ಮ ಮಾತನಾಡಿ, ದಲಿತರು ಸಂಘಟನೆಯ ಮೂಲಕ ಸದೃಢರಾಗಬೇಕು. ಮದ್ಯಪಾನ, ಧೂಮಪಾನ ಇನ್ನಿತರ ಮಾದಕ ವ್ಯಸನದಿಂದ ದೂರವಿದ್ದು, ಅಂಬೇಡ್ಕರರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು. ಈ ಸಂದರ್ಭ ದ.ಸಂ.ಸ. ಸಂಘಟನಾ ಸಂಚಾಲಕ ಸಿಂಗಿ ಸತೀಶ್, ತಾಲೂಕು ಸಂಚಾಲಕರ ಕುಮಾರ್, ಜಿಲ್ಲಾ ಯುವ ಮುಖಂಡ ಮುರುಗ, ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮಹೇಶ್ ಇನ್ನಿತರರು ಇದ್ದರು. ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕ ಸಿಂಗಿ ಸತೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.