ಕೂಡಿಗೆ, ಏ. ೨೭: ಮಡಿಕೇರಿ ವಿಧಾನಸಭಾ ಕ್ಷೇತ್ರದ ಇಂಡಿಯಾ ಮೂವ್‌ಮೆಂಟ್ ಪಾರ್ಟಿಯ ಅಭ್ಯರ್ಥಿ ರಶೀದ್ ಬೇಗಂ ಅವರು ಕುಶಾಲನಗರ, ಕೂಡಿಗೆ, ಕೂಡುಮಂಗಳೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಮಾತನಾಡಿ, ಸಮಾಜದ ಬದಲಾವಣೆಗೆ ಮತ್ತು ಜಿಲ್ಲೆಯ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಯೋಜನೆಯ ಅಡಿಯಲ್ಲಿ ತೊಡಗಿಸಿಕೊಳ್ಳಲು ಈ ಬಾರಿ ಇಂಡಿಯಾ ಮೂವ್‌ಮೆಂಟ್ ಪಾರ್ಟಿಯ ಅಭ್ಯರ್ಥಿ ಹಾಗೂ ಸಮಾಜ ಸೇವಕಿ ರಶೀದ್ ಬೇಗಂ ಅವರಿಗೆ ಸಹಕಾರ ನೀಡುವಂತೆ ಮತದಾರರಲ್ಲಿ ಮನವಿಯನ್ನು ಮಾಡಿದರು.

ಇಂಡಿಯಾ ಮೂವ್‌ಮೆಂಟ್ ಪಾರ್ಟಿಯ ರಾಷ್ಟಿçÃಯ ಅಧ್ಯಕ್ಷ ಅಬ್ದುಲ್ ಸರ್ಬ್ ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಹಾಜರಿದ್ದರು.