ಕುಶಾಲನಗರ, ಏ. ೨೬: ಸಂಬAಧಿಕರ ತಿಥಿ ಕಾರ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಗುಡ್ಡೆ ಹೊಸೂರು ಹಾರಂಗಿ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮೂಲತಃ ಸೂರ್ಲಬ್ಬಿ ನಿವಾಸಿಯಾಗಿದ್ದು, ಸೋಮವಾರಪೇಟೆ ಪಟ್ಟಣದಲ್ಲಿ ನೆಲೆಸಿರುವ ಓಡಿಯಂಡ ಮಾಚಯ್ಯ (೬೦) ಮೃತಪಟ್ಟ ದುರ್ದೈವಿ.
ಮೃತ ಮಾಚಯ್ಯ ಅವರು ಗುಡ್ಡೆ ಹೊಸೂರು ಬಳಿ ನಡೆದ ತಿಥಿ ಕಾರ್ಯದಲ್ಲಿ ಪಾಲ್ಗೊಂಡು ಸ್ಕೂಟಿ (ಏಂ೧೨ ಖ೩೬೦೭) ಯಲ್ಲಿ ಸೋಮವಾರಪೇಟೆ ಕಡೆಗೆ ತೆರಳುತ್ತಿದ್ದ ಸಂದರ್ಭ ಹಾರಂಗಿ ರಸ್ತೆಯ ಅತ್ತೂರು ಬಳಿ ಮಳೆಯ ನಡುವೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ.
ಗಾಯಗೊAಡ ಮಾಚಯ್ಯ ಅವರನ್ನು ಸ್ಥಳೀಯರು ಮತ್ತು ಕುಶಾಲನಗರ ಗ್ರಾಮಾಂತರ ಪೊಲೀಸರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತರು, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.