ನಾಪೋಕ್ಲು, ಏ. ೨೬: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕಟ್ ನಮ್ಮೆಯ ಬಾಳೆಯಡ ಕಪ್ ಕ್ರಿಕೆಟ್‌ನ ನಾಲ್ಕನೆಯ ದಿನದ ಪಂದ್ಯಾಟದಲ್ಲಿ ಮುಕ್ಕಾಟಿರ (ಪುಲಿಕೋಟು), ಅಚ್ಚಪಂಡ, ಕೀತಿಯಂಡ, ಚೆನ್ನಪಂಡ, ಕುಂದಿರ, ಪಾರುವಂಗಡ, ಅಪ್ಪುಡ, ಮುಕ್ಕಾಟಿರ (ಬೇತ್ರಿ), ಮಲ್ಲೇಂಗಡ, ಕನ್ನಂಡ ಕುಟುಂಬ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಬಲ್ಲಂಡ ಮತ್ತು ಮುಕ್ಕಾಟಿರ(ಪುಲಿಕೋಟು) ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬಲ್ಲಂಡ ತಂಡ ೬ ವಿಕೆಟ್ ನಷ್ಟಕ್ಕೆ ೪೬ ರನ್‌ಗಳ ಗುರಿ ನೀಡಿತು. ಇದನ್ನು ಬೆನ್ನೆಟ್ಟಿದ ಮುಕ್ಕಾಟಿರ(ಪುಲಿಕೋಟು) ತಂಡ ೧ ವಿಕೆಟ್ ಕಳೆದುಕೊಂಡು ೪೭ ರನ್‌ಗಳಿಸಿ ಜಯ ಸಾಧಿಸಿತು. ನಾಟೋಳಂಡ ಮತ್ತು ಅಚ್ಚಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಟೋಳಂಡ ತಂಡ ೪ ವಿಕೆಟ್ ನಷ್ಟಕ್ಕೆ ೩೮ ರನ್‌ಗಳ ಸವಾಲೊಡ್ಡಿತು. ಇದನ್ನು ಬೆನ್ನೆಟ್ಟಿದ ಅಚ್ಚಪಂಡ ತಂಡ ೧ ವಿಕೆಟ್ ಕಳೆದುಕೊಂಡು ೪೧ ರನ್‌ಗಳಿಸಿ ಗೆಲುವು ಸಾಧಿಸಿತು. ಪುಟ್ಟಿಚಂಡ ಮತ್ತು ಅಪ್ಪಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಟ್ಟಿಚಂಡ ತಂಡವು ೯ ವಿಕೆಟ್ ನಷ್ಟಕ್ಕೆ ೫೫ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಅಪ್ಪಾರಂಡ ತಂಡವು ೩ ವಿಕೆಟ್ ನಷ್ಟಕ್ಕೆ ೮೪ ರನ್‌ಗಳಿಸಿ ಮುನ್ನಡೆ ಸಾಧಿಸಿತು.

ಬೇರೆರ ಮತ್ತು ಕೀತಿಯಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಬೇರೆರ ತಂಡ ೬ ವಿಕೆಟ್ ನಷ್ಟಕ್ಕೆ ೨೨ ರನ್‌ಗಳಿಸಿತು. ಅದನ್ನು ಹಿಂಬಾಲಿಸಿದ ಕೀತಿಯಂಡ ತಂಡ ೧ ವಿಕೆಟ್ ನಷ್ಟಕ್ಕೆ ೨೩ ರನ್‌ಗಳಿಸಿ ವಿಜಯಪತಾಕೆ ಹಾರಿಸಿತು. ಚೆನ್ನಪಂಡ ಮತ್ತು ಕೋಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆನ್ನಪಂಡ ತಂಡವು ೪ ವಿಕೆಟ್ ನಷ್ಟಕ್ಕೆ ೪೨ ರನ್‌ಗಳಿಸಿದರೆ, ಕೋಡಿರ ತಂಡವು ೩ ವಿಕೆಟ್ ನಷ್ಟಕ್ಕೆ ೩೯ ರನ್‌ಗಳಿಸಿ ಸೋಲನುಭವಿಸಿತು. ಕುಂದಿರ ಮತ್ತು ಅಯ್ಯಕುಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂದಿರ ತಂಡವು ೧ ವಿಕೆಟ್ ನಷ್ಟಕ್ಕೆ ೬೨ ರನ್ ದಾಖಲಿಸಿದರೆ, ಇದನ್ನು ಬೆನ್ನಟ್ಟಿದ ಅಯ್ಯಕುಟ್ಟಿರ ತಂಡವು ೮ ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಅಣ್ಣಾಳಮಾಡ ಮತ್ತು ಪಾರುವಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಣ್ಣಾಳಮಾಡ ತಂಡ ೫ ವಿಕೆಟ್ ನಷ್ಟಕ್ಕೆ ೩೮ ರನ್‌ಗಳಿಸಿದರೆ, ಇದನ್ನು ಬೆನ್ನಟ್ಟಿದ ಪಾರುವಂಗಡ ತಂಡವು ೨ ವಿಕೆಟ್ ನಷ್ಟಕ್ಕೆ ೪೧ ರನ್‌ಗಳಿಸಿ ಗೆಲುವು ಸಾಧಿಸಿತು. ಅಪ್ಪುಡ ಮತ್ತು ಅವರೆಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪುಡ ತಂಡ ೩ ವಿಕೆಟ್ ನಷ್ಟಕ್ಕೆ ೩೬ ರನ್ನಗಳಿಸಿದರೆ, ಅದನ್ನು ಹಿಂಬಾಲಿಸಿದ ಅವರೆಮಾದಂಡ ತಂಡ ೬ ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಕ್ಕಾಟಿರ (ಬೇತ್ರಿ) ಮತ್ತು ಚೆನಿಯಪಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮುಕ್ಕಾಟಿರ ತಂಡವು ೬ ವಿಕೆಟ್ ನಷ್ಟಕ್ಕೆ ೮೭ ರನ್‌ಗಳಿಸಿದರೆ, ಅದನ್ನು ಬೆನ್ನೆಟ್ಟಿದ ಚೆನಿಯಪಂಡ ತಂಡ ೩ ವಿಕೆಟ್ ನಷ್ಟಕ್ಕೆ ೩೪ ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಕೀತಿಯಂಡ ಮತ್ತು ಚೆನ್ನಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕೀತಿಯಂಡ ತಂಡವು ೩ ವಿಕೆಟ್ ನಷ್ಟಕ್ಕೆ ೨೦ ರನ್‌ಗಳಿಸಿತು. ಅದನ್ನು ಬೆನ್ನಟ್ಟಿದ ಚೆನ್ನಪಂಡ ತಂಡ ೧ ವಿಕೆಟ್ ನಷ್ಟಕ್ಕೆ ೨೧ ರನ್‌ಗಳಿಸಿ ಮುನ್ನಡೆ ಸಾಧಿಸಿತು. ಕೂತಂಡ ಮತ್ತು ಮಲ್ಲೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡ ೪ ವಿಕೆಟ್ ನಷ್ಟಕ್ಕೆ ೫೦ ರನ್‌ಗಳ ಗುರಿ ನೀಡಿತು. ಅದನ್ನು ಬೆನ್ನಟ್ಟಿದ ಮಲ್ಲೇಂಗಡ ತಂಡ ೧ ವಿಕೆಟ್ ನಷ್ಟಕ್ಕೆ ೫೪ ರನ್‌ಗಳಿಸಿ ಗೆಲುವು ಸಾಧಿಸಿತು. ಅಪ್ಪಾರಂಡ ಮತ್ತು ಪಾರುವಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಾರಂಡ ತಂಡವು ೩ ವಿಕೆಟ್ ನಷ್ಟಕ್ಕೆ ೩೨ ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ಪಾರುವಂಗಡ ತಂಡವು ೧ ವಿಕೆಟ್ ನಷ್ಟಕ್ಕೆ ೩೬ ರನ್‌ಗಳಿಸಿ ಜಯ ಸಾಧಿಸಿತು. ಕುಂದಿರ ಮತ್ತು ಕನ್ನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂದಿರ ತಂಡವು ೪ ವಿಕೆಟ್ ನಷ್ಟಕ್ಕೆ ೨೮ ರನ್ ಗಳಿಸಿದರೆ, ಕನ್ನಂಡ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ ೩೪ ರನ್‌ಗಳಿಸಿ ಗೆಲುವು ಸಾಧಿಸಿತು.