ಮಡಿಕೇರಿ, ಏ. ೨೬: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಭಾಷಿಕ ಗೌಡ ಕುಟುಂಬಗಳ ನಡುವೆ ಮರಗೋಡು ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಣತ್ತಲೆ ಕಪ್ ಫುಟ್ಬಾಲ್‌ನಲ್ಲಿ ಪರಿಚನ, ಬೊಳ್ಳೂರು, ಎಡಿಕೇರಿ, ಕಲ್ಲುಮುಟ್ಲು ತಂಡಗಳು ಪ್ರೀ ಕ್ವಾರ್ಟರ್ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಪರಿಚನ ತಂಡ ಮುಕ್ಕಾಟಿ (ಬಿ) ತಂಡವನ್ನು ೩-೦ ಗೋಲಿನಿಂದ ಸೋಲಿಸಿತು. ಚೆಟ್ಟಿಮಾಡ ತಂಡ ಪಡ್ಪುಮನೆ ತಂಡವನ್ನು ೨-೦ ಗೋಲಿನಿಂದ ಮಣಿಸಿತು. ಬೊಳ್ಳೂರು ತಂಡ ಪಟ್ಟೆಮನೆ ತಂಡವನ್ನು ೪-೦ ಗೋಲಿನಿಂದ ಸೋಲಿಸಿತು. ಪರಿಚನ ತಂಡ ಕಟ್ಟೆಮನೆ ತಂಡವನ್ನು ಟ್ರೆöÊಬ್ರೇಕರ್‌ನಲ್ಲಿ ೧೪-೧೩ ಗೋಲಿನಿಂದ ಸೋಲಿಸಿತು. ಎಡಿಕೇರಿ ತಂಡ ಪಡಿಕಲ್ಲು ತಂಡವನ್ನು ಟ್ರೆöÊಬ್ರೇಕರ್‌ನಲ್ಲಿ ೪-೩ ಗೋಲಿನಿಂದ ಸೋಲಿಸಿತು. ಕಲ್ಲುಮುಟ್ಲು, ಚೆಟ್ಟಿಮಾಡ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಪರ್ಲಕೋಟಿ ಮುಂದಿನ ಹಂತ ಪ್ರವೇಶಿಸಿವೆ.