ಕೂಡಿಗೆ, ಏ. ೨೫: ಬಸವನತ್ತೂರು ಗ್ರಾಮದಲ್ಲಿರುವ ಮನು ತಿಮ್ಮಣ್ಣ, ದೇವಮ್ಮಜಿ ಎಂಬವರಿಗೆ ಸೇರಿದ ಮನೆಯ ಮೇಲೆ ಗಾಳಿಗೆ ಮನೆಯ ಸಮೀಪದಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಮನೆ ಹಾಗೂ ಸಮೀಪದಲ್ಲಿ ನಿಲ್ಲಿಸಲಾಗಿದ್ದ ಕಾರು, ಬೈಕ್, ಆಟೋಗೆ ಹಾನಿಯಾಗಿದೆ.
ಸ್ಥಳಕ್ಕೆ ಕುಶಾಲನಗರದ ಕಂದಾಯ ಇಲಾಖೆ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲಿಸಿತು.