ಮಡಿಕೇರಿ, ಏ. ೨೫: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕ ಉತ್ಸವ ತಾ. ೨೭ ರಿಂದ ಮೇ ೧ ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ತಾ. ೨೭ ರಂದು ಬೆಳಿಗ್ಗೆ ೭ ಗಂಟೆಗೆ ದೇವಾಲಯದಲ್ಲಿ ಪ್ರಾರ್ಥನೆ, ಕಗ್ಗೋಡ್ಲುವಿನ ಶ್ರೀ ಬೊಟ್ಲಪ್ಪ ದೇವಾಲಯದಿಂದ ತೀರ್ಥ ತೆಗೆದುಕೊಂಡು ಬರುವುದು, ಗಣಪತಿ ಹೋಮ, ತೀರ್ಥಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೬ ಗಂಟೆಗೆ ಪ್ರಾರ್ಥನೆ, ಭಂಡಾರ ತರುವುದು, ಅಂದಿಬೆಳಕು, ಶ್ರೀ ದೇವರ ಬಲಿ, ಪ್ರಸಾದ ವಿತರಣೆ ನಡೆಯಲಿದೆ.

ತಾ. ೨೮ ರಂದು ಬೆಳಿಗ್ಗೆ ೫ ಗಂಟೆಗೆ ದೇವರು ಬಲಿ ಬರುವುದು ೧೦ ಗಂಟೆಗೆ ಹಬ್ಬದ ಕಟ್ಟು ಮುರಿಯುವುದು, ಶ್ರೀ ದೇವರ ನೃತ್ಯ ಬಲಿ, ವಸಂತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ. ಸಂಜೆ ೫ ಗಂಟೆಗೆ ದೇವರು ಜಳಕಕ್ಕೆ ಹೋಗುವುದು ನಂತರ ದೇವರ ನೃತ್ಯ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಜರುಲಿದೆ.

ತಾ. ೨೯ ರಂದು ಬೆಳಿಗ್ಗೆ ಹತ್ತು ಗಂಟೆಗೆ ಗಣಪತಿ ಹೋಮ, ಶುದ್ಧ ಕಲಶ, ಮಹಾಪೂಜೆ, ಪ್ರಸಾದ ವಿತರಣೆ. ತಾ. ೩೦ ರಂದು ಸಂಜೆ ಆರು ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೋತ ಹೊರಡುವುದು, ಶ್ರೀ ಅರ್ಧನಾರೀಶ್ವರ ದೇವಾಲಯದಿಂದ ದೀಪ ತರುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಮೂರ್ತಿಗಳ ಕೋಲ ನೆರವೇರಲಿದೆ.

ಮೇ ೧ ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಅಜ್ಜಪ್ಪ ಕೋಟದಲ್ಲಿ ಅಜ್ಜಪ್ಪ ದೇವರ ಕೋಲ, ೧೦.೩೦ಕ್ಕೆ ಶ್ರೀ ವಿಷ್ಣುಮೂರ್ತಿ ಮೇಲೆರಿ, ಪ್ರಸಾದ ವಿತರಣೆ, ಮಧ್ಯಾಹ್ನ ೨.೩೦ಕ್ಕೆ ದೇವರಿಗೆ ಬೇಟೆ ಕಾರ್ಯಕ್ರಮಗಳನ್ನು ನಡೆಸಲಾಗುವುದು.