ಜಾಕಿ ಎಂದರೆ ಸಮ ಮೈಕಟ್ಟು, ತೂಕ ಹಾಗೂ ಅಳತೆ ತೂಗುವಂತೆ ಕುದುರೆಯ ಮೇಲೆ ಕುಳಿತು ತನ್ನ ಹತೋಟಿಯಲ್ಲಿ ನಿಯಂತ್ರಿ ಸುವುದು, ಇದು ಒಂದು ಕಲಾತ್ಮಕ ಆಟ ಹಾಗೂ ಒಂದು ರೋಚಕ ವಿದ್ಯೆ.

ಕೊಡಗಿನ ಹೆಸರಾಂತ ಜಾಕಿ ಮನೆಯಪಂಡ ರಾಜು ನಿರಂತರವಾಗಿ ೪ ದಶಕಗಳ ಕಾಲ ತನ್ನ ನೈಪುಣ್ಯವನ್ನು ಪಳಗಿಸಿ, ಆಮೇಲೆ ತರಬೇತುದಾರರಾಗಿ ಕೊಡಗಿಗೆ ಹೆಸರು ತಂದು ಜಾಕಿ ರಾಜು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಹೊಟ್ಟೇಂಗಡ ಪೂಣಚ್ಚ ಕೂಡ ಜಾಕಿಯಲ್ಲಿ ಹೆಸರು ಗಳಿಸಿದರು. ಇನ್ನೊಬ್ಬ ಯುವ ಪ್ರತಿಭೆ ಪಟ್ಟಡ ಮೋಹನ್ ಬೋಪಣ್ಣ, ಜನರಲ್ ಬಸ್ ಮಾಲೀಕ ಮೋಹನ್ ಅವರ ಮಗ ಜಪಾನಿನಲ್ಲಿ ಜಾಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಾರ ದೇಹದ ತೂಕ ೫೫ಕೆಜಿ ಮೀರದಂತೆ ನೋಡಿಕೊಳ್ಳಬೇಕು. ಕೊಡಗಿನ ಬೇರೆ ಜಾಕಿಗಳು ಹಾಗೂ ತರಬೇತುದಾರರು ಮುರುವಂಡ ಮಿಲನ್, ಕೇಕಡ ಮಂದಣ್ಣ, ಚೇರಂಡ ಪುನೀತ್, ನಡಿಕೇರಿಯಂಡ ಗಣೇಶ್, ಚೆಂದ್ರಿಮಾಡ ಕುಟ್ಟಪ್ಪ, ಚೆಂದ್ರಿಮಾಡ ಮೊಣ್ಣಪ್ಪ, ಮಂಗೇರೀರ ವಿಕ್ರಮ್, ಕೊಂಗAಡ ಪ್ರದೀಪ್ ಹಾಗೂ ಆದೇಂಗಡ ನಳ ಇವರುಗಳು ಇದುವರೆಗೆ ಜಾಕಿ... ಹೆಸರು ಮಾಡಿದವರು ಇವರ ಪ್ರಕಾರ ಜಾಕಿಯ ದೇಹದ ತೂಕ ೪೦ ಕೆಜಿ ಇದ್ದರೆ ಕುದುರೆಯ ಮೇಲೆ ಸವಾರಿ ಮಾಡಲು ಸೂಕ್ತ. ಇದರ ಬಗ್ಗೆ ಎಲ್ಲಾ ಮಾಹಿತಿಗಳನ್ನು ನಳ ಅವರು ಒದಗಿಸಿದ್ದಾರೆ.

ಇದೀಗ ಪೊನ್ನಂಪೇಟೆ ತಾಲ್ಲೂಕು ಚಿಕ್ಕಮುಂಡೂರು ಗ್ರಾಮದ ಚಿಮ್ಮಣಮಾಡ ಪೆಮ್ಮಯ್ಯ ಹಾಗೂ ರೋಹಿಣಿ ದಂಪತಿಯ ಹಿರಿಯ ಪುತ್ರ ಚಿಮ್ಮಣಮಾಡ ಬೋಪಣ್ಣ ಗಮನ ಸೆಳೆಯುತ್ತಿದ್ದಾರೆ. ಬಾಲ್ಯದಲ್ಲಿ ಅಪ್ಪಚ್ಚುಕವಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಹೈದರಾಬಾದಿನಲ್ಲಿ ೬ ವರ್ಷ ಜಾಕಿಯಾಗಿ, ಅನೇಕ ಬಾರಿ ವಿಜಯ ಸಾಧಿಸಿದರು. ೬ ವರ್ಷ ಎಮ್.ಎ.ಎಂ ರಾಮಸ್ವಾಮಿಯವರ ಜೊತೆ ಷರತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ೨೦೧೭ರಲ್ಲಿ ‘mಚಿgiಛಿಚಿಟ sಞiಟಟ’ ಎಂಬ ಕುದುರೆಯನ್ನು ಮೊದಲು ತರುವುದರಲ್ಲಿ ಯಶಸ್ವಿಯಾದರು.

ಇವರು ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರ ಸಹಕಾರದೊಂದಿಗೆ ಈಗ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಅಲ್ಲಿಯೂ ಜಾಕಿಯಾಗಿ ಮುಂದುವರಿಯುತ್ತಿದ್ದಾರೆ.

ಇವರಿಗೆ ಕೊಡಗಿನ ದೇವತೆಗಳಾದ ಇಗ್ಗುತಪ್ಪ, ಕಾವೇರಮ್ಮ ಅವರ ಆಶೀರ್ವಾದದಿಂದ ಇನ್ನಷ್ಟು ಯಶಸ್ವಿ ಕಾಣಲಿ, ಎಂಬದು ಕೊಡಗಿನ ಜನರ ಆಶಯ.

-ಚೆಪ್ಪುಡೀರ ಕಾರ್ಯಪ್ಪ