ಕುಶಾಲನಗರ, ಏ. ೨೫: ಆದಿಶಂಕರರ ಜಯಂತಿ ಅಂಗವಾಗಿ ಕುಶಾಲನಗರ ವಿಪ್ರ ಅರ್ಚಕರ ವೇದಿಕೆ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ರುದ್ರ ಹೋಮ ನಡೆಯಿತು. ನಂತರ ವೇದಿಕೆ ಸಂಚಾಲಕರಾದ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಬೈಚನಹಳ್ಳಿ ಬಳಿಯಿಂದ ಆದಿಶಂಕರರ ರಥದ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ತೆರಳಿ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಸಮಾಪನೆಗೊಂಡು ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಪಟ್ಟಣದ ವಿವಿಧ ದೇವಾಲಯಗಳ ಅರ್ಚಕರು ಭಕ್ತಾದಿಗಳು ಪಾಲ್ಗೊಂಡಿದ್ದರು.