ಸೋಮವಾರಪೇಟೆ, ಏ. ೨೪ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಭಯಮುಕ್ತ ಮತದಾನಕ್ಕಾಗಿ ಸೋಮವಾರಪೇಟೆ ಪಟ್ಟಣದಲ್ಲಿ ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್, ಸಿ.ಐ.ಎಸ್.ಎಫ್. ಸೇರಿದಂತೆ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನ ನಡೆಸಿ, ಸಾರ್ವಜನಿಕ ವಲಯದಲ್ಲಿ ಧೈರ್ಯ ತುಂಬಿದರು.
ಪೊಲೀಸ್ ಡಿವೈಎಸ್‌ಪಿ ಗಂಗಾಧರಪ್ಪ, ಐಟಿಬಿಪಿ ಡಿವೈಎಸ್‌ಪಿ ಕಮಲ್‌ಕುಮಾರ್, ಸಿಐಎಸ್‌ಎಫ್ ಡಿವೈಎಸ್‌ಪಿ ಚೌಹಾಣ್ ಅವರುಗಳ ನೇತೃತ್ವದಲ್ಲಿ ೧೨೦ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.
ಪಟ್ಟಣದ ಕಕ್ಕೆಹೊಳೆ ಜಂಕ್ಷನ್, ಸಿ.ಕೆ. ಸುಬ್ಬಯ್ಯ ರಸ್ತೆ, ಮಾರ್ಕೆಟ್ ಏರಿಯಾ, ರಾಮಮಂದಿರ ರಸ್ತೆ, ರೇಂಜರ್ ಬ್ಲಾಕ್, ಜನತಾ ಕಾಲೋನಿ, ಬಸವೇಶ್ವರ ರಸ್ತೆ, ಮುಖ್ಯರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು.