ಮಡಿಕೇರಿ, ಏ. ೨೪: ಅಖಿಲ ಅಮ್ಮಕೊಡವ ಸಮಾಜದ ಸಹಯೋಗದೊಂದಿಗೆ ಎಂಟನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆ-೨೦೨೩ ತಾ. ೨೯ ರಿಂದ ಮೇ ೧ರ ವರೆಗೆ ಜರುಗಲಿದೆ. ಈ ಬಾರಿಯ ಪಂದ್ಯಾವಳಿಯನ್ನು ಬಾಡಗರಕೇರಿ ಮೂಲದ ಅಮ್ಮತ್ತೀರ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ. ಕಳೆದ ವರ್ಷ ಪೊನ್ನಂಪೇಟೆಯಲ್ಲಿ ಹೆಮ್ಮಚ್ಚಿಮನೆ ಕಪ್ ಪಂದ್ಯಾವಳಿ ಜರುಗಿದ್ದು, ಈ ಬಾರಿ ಅಮ್ಮತ್ತೀರ ಕಪ್‌ನಲ್ಲಿ ೧೮ ಕುಟುಂಬಗಳು ಪಾಲ್ಗೊಳ್ಳುತ್ತಿವೆ. ಈ ಬಗ್ಗೆ ಉತ್ಸವ ಸಮಿತಿಯ ಅಧ್ಯಕ್ಷರಾದ ಎ.ಆರ್. ಪ್ರಸಾದ್, ಕಾರ್ಯದರ್ಶಿ ಎ.ಎ. ಚಂದ್ರಶೇಖರ್ ಅವರುಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ವಿವಿಧೆಡೆ ನೆಲೆಸಿರುವ ಅಮ್ಮಕೊಡವ ಜನಾಂಗದವರಿಗೆ ಪಾಲ್ಗೊಳ್ಳಲು ಅನುಕೂಲವಾಗುವಂತೆ ಹಾತೂರು ಕೇಂದ್ರ ಸ್ಥಾನವಾಗಲಿದ್ದು, ಹಾತೂರು ಶಾಲಾ ಮೈದಾನದಲ್ಲಿ ಪಂದ್ಯಾಟ ಏರ್ಪಡಿಸಲಾಗುತ್ತಿದೆ. ಪಂದ್ಯಾವಳಿಯ ಯಶಸ್ಸಿಗಾಗಿ ಎ.ಆರ್. ಪ್ರಸಾದ್ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಎ.ಎಸ್. ಸುರೇಶ್, ಸಲಹೆಗಾರರಾಗಿ ಎ.ಎಸ್. ವಾಸು ವರ್ಮ, ಸಂಘಟನಾ ಕಾರ್ಯದರ್ಶಿಗಳಾಗಿ ಎ.ಕೆ. ಗಣೇಶ್, ಎ.ಎನ್. ಗಣೇಶ್, ಎ.ವಿ. ರಾಜೇಶ್, ರೇವತಿ, ತನು, ಪುಷ್ಪ, ದಿವ್ಯ ಮತ್ತಿತರರು ಕಾರ್ಯನಿರ್ವಹಿಸುತ್ತಿ ದ್ದಾರೆ.
(ಮೊದಲನೇ ಪುಟದಿಂದ) ಸ್ವಾಗತ ಸಮಿತಿ, ಆಹಾರ ಸಮಿತಿ, ಮೈದಾನ ಸಮಿತಿ, ವೇದಿಕೆ ಸಮಿತಿಯನ್ನು ಹಲವರ ನೇತೃತ್ವದಲ್ಲಿ ರಚಿಸಲಾಗಿದೆ.
ಉದ್ಘಾಟನಾ ದಿನದಂದು ಜನಾಂಗದ ಹಲವು ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಬಹುಮಾನದೊಂದಿಗೆ ಇತರ ಸಾಧಕರಿಗೂ ವಿಶೇಷ ಬಹುಮಾನ ನೀಡಲಾಗುವುದು. ಅಮ್ಮತ್ತೀರ ಕುಟುಂಬಸ್ಥರೊAದಿಗೆ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಕಾರ್ಯದರ್ಶಿ ಪುತ್ತಾಮನೆ ಗಣೇಶ್ ಹಾಗೂ ಸಮಾಜದವರು ಸಹಕಾರ ನೀಡುತ್ತಿದ್ದಾರೆ.
ಆಯೋಜಕರಾಗಿರುವ ಅಮ್ಮತ್ತೀರ ಕುಟುಂಬದವರು ಬಾಡಗರಕೇರಿಯವರಾಗಿದ್ದು, ಹಲವೆಡೆ ನೆಲೆಸಿದ್ದಾರೆ ಎಂದು ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದ್ದಾರೆ. ಈಗಾಗಲೇ ಪಂದ್ಯಾವಳಿಯ ಟೈಸ್ ಅನ್ನೂ ಬಿಡುಗಡೆ ಮಾಡಲಾಗಿದೆ.