ಕೂಡಿಗೆ, ಏ. ೨೪: ಹಾರಂಗಿ ಅಣೆಕಟ್ಟೆಯಿಂದ ರೈತರ ಬೇಸಾಯಕ್ಕೆ ಅನುಕೂಲವಾಗುವಂತೆ ಮುಖ್ಯ ನಾಲೆಯು ನಿರ್ಮಾಣವಾಗಿ ಅದರ ಮೂಲಕ ಉಪ ಕಾಲುವೆಗಳ ಮೂಲಕ ನೀರನ್ನು ಹರಿಸಿ ಬೇಸಾಯಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಮುಖ್ಯ ನಾಲೆ ಮೇಲೆ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ನೆಡಲಾದ ಮರಗಳು ಈಗಾಗಲೇ ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿರುವ ಕಾರಣದಿಂದಾಗಿ ಅವುಗಳಿಂದ ಮುಖ್ಯ ನಾಲೆಗೆ ಅಳವಡಿಕೆ ಮಾಡಿರುವ ಕಾಂಕ್ರಿಟ್‌ನ ತಡೆಗೋಡೆ ಹಾಳಾಗುವುದರ ಜೊತೆಗೆ ಮರದ ಬೇರುಗಳ ಮೂಲಕ ನೀರು ಹೊರಬರುತ್ತಿದ್ದು ಇದರಿಂದಾಗಿ ನಾಲೆಯ ಕೆಲ ಭಾಗಗಳು ಶೀತಮಯವಾಗಿದ್ದು, ಕುಸಿಯುವ ಹಂತ ತಲುಪಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಆಗುಬಹುದಾದ ಅನಾಹುತಗಳನ್ನು ತಪ್ಪಿಸಲು ನಾಲೆಯ ಮೇಲಿನ ಮರಗಳನ್ನು ತೆರವುಗೊಳಿಸಲು ಈ ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಎರಡು ಬದಿಯ ನಾಲೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಸಸಿಗಳನ್ನು ನೆಡಲಾಗಿತ್ತು. ಆದರೆ ಇದೀಗ ಬೆಳೆದು ನಿಂತಿರುವ ಮರಗಳಿಂದ ಆಗುತ್ತಿರುವ ತೊಂದರೆಗಳನ್ನು ಸಂಬAಧಿಸಿದ ನೀರಾವರಿ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಮರಗಳ ತೆರವಿಗೆ ಮುಂದಾಗಬೇಕೆAಬುದು ರೈತರ ಆಗ್ರಹವಾಗಿದೆ.
ಮುಖ್ಯ ನಾಲೆಯ ಅಚ್ಚುಕಟ್ಟು ಪ್ರದೇಶವು ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯ ನಾಲ್ಕು ತಾಲೂಕಿನ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶವಿದ್ದು, ಆ ಪ್ರದೇಶಗಳಿಗೆ ನೀರಿನ ಹರಿಯುವಿಕೆಯ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಇಲಾಖೆಯ ವತಿಯಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರ ಜೊತೆಯಲ್ಲಿ ಮರಗಳಿಂದ ಆಗುತ್ತಿರುವ ನೀರಿನ ಸೋರಿಕೆಯನ್ನು ತಡೆಗಟ್ಟಲು ಮತ್ತು ನಾಲೆಯ ತಡೆಗೋಡೆಯು ಶಾಶ್ವತವಾಗಿ ಇರಲು ಮರ ಮತ್ತು ಮರದ ಬೇರುಗಳನ್ನು ಕಟಾವು ಮಾಡಿ ತೆಗೆದರೆ ನೀರು ಸರಾಗವಾಗಿ ನಾಲೆಯಲ್ಲಿ ಹರಿಯಲು ಅನುಕೂಲವಾಗುವುದು. ಇದರಿಂದಾಗಿ ಸಂಬAಧಿಸಿದ ಇಲಾಖೆಯವರು ಮುಂದಿನ ದಿನಗಳಲ್ಲಿ ನಾಲೆಗಳಲ್ಲಿ ನೀರು ಹರಿಸುವ ಮುಂಚಿತವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಹಾರಂಗಿಯಿAದ ಶಿರಂಗಾಲದವರೆಗಿನ ವಿವಿಧ ನೀರು ಬಳಕೆದಾರ ಸಂಘದ ಅಧ್ಯಕ್ಷರುಗಳ ಒತ್ತಾಯವಾಗಿದೆ.