ಸೋಮವಾರಪೇಟೆ, ಏ. ೨೪: ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು ೭೪ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ೬೦ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.೮೧.೦೮ ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ ೪೯ ವಿದ್ಯಾರ್ಥಿಗಳಲ್ಲಿ ೪೪ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೯೦ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಶೇ.೬೪ ರಷ್ಟು ಫಲಿತಾಂಶ ದೊರಕಿದೆ.

ಕದಿಜತ್ ಶಿರಿನ್ ೬೦೦ಕ್ಕೆ ೪೯೨, ಎಚ್.ಆರ್. ಪೂಜಾ ೪೮೬, ಎಸ್.ಪಿ. ಅಸ್ಮ ೪೭೮ ಅಂಕ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ೨೫ ವಿದ್ಯಾರ್ಥಿಗಳಲ್ಲಿ ೧೬ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ೮ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಎಂ.ಬಿAದು ೫೩೦, ಕೆ.ಎಚ್. ಕೀರ್ತನ ೪೯೬, ಎಸ್.ಕೆ. ನಿಶಾ ೪೫೩ ಅಂಕ ಗಳಿಸಿದ್ದಾರೆ.

ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿಗೆ ಶೇ.೯೦ರಷ್ಟು ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ೫೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೪೫ ಮಂದಿ ಪಾಸಾಗಿದ್ದಾರೆ. ೮ ವಿದ್ಯಾರ್ಥಿಗಳು ಅತ್ತುö್ಯನ್ನತ ಶ್ರೇಣಿ, ೨೩ ಉನ್ನತ ಶ್ರೇಣಿ, ೧೪ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ಧಾರೆ. ಬಿ.ಎಚ್. ಪ್ರನುತಾ ೫೭೧ (ಶೇ.೯೫.೧೬), ಪಿ.ಜೆ.ರಕ್ಷಿತ್ ೫೭೦ (ಶೇ.೯೫), ಪೂರ್ವಿಕಾ ೫೪೭ (ಶೇ.೯೧.೧೬) ಅಂಕ ಗಳಿಸಿದ್ದಾರೆ.

ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿಗೆ ಶೇ.೯೭ರಷ್ಟು ಫಲಿತಾಂಶ ದೊರೆತಿದೆ. ವಾಣಿಜ್ಯ ವಿಭಾಗದಲ್ಲಿ ೯೧ ವಿದ್ಯಾರ್ಥಿಗಳಲ್ಲಿ ೯೦ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೯೯ ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ೪೦ ವಿದ್ಯಾರ್ಥಿಗಳಲ್ಲಿ ೩೭ ಮಂದಿ ಉತ್ತೀರ್ಣರಾಗಿ ಶೇ.೯೩ ಫಲಿತಾಂಶ ಲಭಿಸಿದೆ. ಒಟ್ಟು ೩೩ ವಿದ್ಯಾರ್ಥಿಗಳು ಅತ್ತುö್ಯನ್ನತ ಶ್ರೇಣಿ, ೮೪ ಉನ್ನತಶ್ರೇಣಿ, ೯ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪಾವನಿ ೫೭೪ (ಶೇ.೯೬), ಗ್ರೇಟಾ ಡಿಸೋಜ ೫೭೪ (ಶೇ.೯೬), ವಿಜ್ಞಾನ ವಿಭಾಗದಲ್ಲಿ ಬಿ.ಆರ್. ಧನುಶ್ ೫೫೯ (ಶೇ.೯೩), ಜಾನ್ಸನ್ ಅಂತೋಣಿ ೫೫೮ (ಶೇ.೯೩) ಅಂಕ ಪಡೆದಿದ್ದಾರೆ.

ಶನಿವಾರಸಂತೆ : ಪಟ್ಟಣದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪಿ.ಯು. ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಶೇ. ೯೮ ಲಭಿಸಿದೆ.

ಕಲಾ ವಿಭಾಗದಲ್ಲಿ ೧೩ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಅಕ್ಷತಾ ೬೦೦ಕ್ಕೆ ೫೭೮ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೪೨ ವಿದ್ಯಾರ್ಥಿಗಳಲ್ಲಿ ೪೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಕೆ.ಎಸ್. ಸುಚಿತಾ ೬೦೦ಕ್ಕೆ ೫೯೨ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಶನಿವಾರಸAತೆ : ಸಮೀಪದ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೯೫ ಫಲಿತಾಂಶ ಗಳಿಸಿದೆ.

ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ. ೧೦೦ ಫಲಿತಾಂಶ ಬಂದಿದ್ದು, ೩೧ ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿನಿ ಕೆ.ಎನ್. ರಶ್ಮಿ ೫೬೮ (ಶೇ. ೯೪.೬), ಸಾನಿಯ ೫೬೮ (೯೪.೬) ಹಾಗೂ ತೊಂಟೇಶ್ ೫೧೭ (ಶೇ. ೮೬) ಅಂಕಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಶೇ. ೯೩.೭೫ ಫಲಿತಾಂಶ ಗಳಿಸಿದ್ದು, ೩೨ ವಿದ್ಯಾರ್ಥಿಗಳ ಪೈಕಿ ೩೦ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿನಿ ಹೆಚ್.ಜೆ. ಪೃಥ್ವಿ ೫೨೯ (ಶೇ. ೮೮) ಹಾಗೂ ಗಗನಗೌತಮ್ ೫೧೬ (ಶೇ. ೮೬) ಅಂಕಗಳನ್ನು ಪಡೆದುಕೊಂಡಿದ್ದಾರೆ.

ವೀರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಈ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಈ ಸಾಲಿನಲ್ಲಿ ಕಾಲೇಜಿನ ೧೯೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ೭೬ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೧೦೨ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೃತಿಕ ಬಿ.ಕೆ ೫೮೫ ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸುಮೆರ ಎಂ.ಎಸ್ ೫೮೦ ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

೫೭೭ ಅಂಕ ಗಳಿಸಿದ ಜಾಸ್ಮಿನ್ ವೇಗಸ್ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ೫೭೨ ಅಂಕ ಗಳಿಸಿ ಜಾಸ್ಮಿನ್ ಪಿ.ಎ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಶೇ. ೯೧ ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದೆ. ಪರೀಕ್ಷೆ ಎದುರಿಸಿದ ೧೩೪ ವಿದ್ಯಾರ್ಥಿಗಳಲ್ಲಿ ೧೨೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೧೪ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸಮೀಪದ ಪಾಲಿಬೆಟ್ಟದ ಸರಕಾರಿ ಪದವಿ ಪೂರ್ವ ಕಾಲೇಜಿನ ೭೫ ವಿದ್ಯಾರ್ಥಿಗಳಲ್ಲಿ ೬೬ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ ೮೮ ರಷ್ಟು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಿಜ್ವಾನ ೫೫೫ ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಮೀಪದ ಪೆರುಂಬಾಡಿಯ ಶಂಶುಲ್ ಪದವಿ ಪೂರ್ವ ಕಾಲೇಜು ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ ಶೇ. ೧೦೦ ರಷ್ಟು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. ೯೬ ರಷ್ಟು ಫಲಿತಾಂಶ ಪಡೆದುಕೊಂಡಿದೆ. ಒಟ್ಟು ೭ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ದ್ವಿತೀಯ ಪಿಯುಸಿಯಲ್ಲಿ ಶೇ. ೧೦೦ ಫಲಿತಾಂಶ ಪಡೆದುಕೊಂಡಿದ್ದು, ೩೧ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೨೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿ ಪಡೆದುಕೊಂಡಿದ್ದಾರೆ.

ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಪರೀಕ್ಷೆ ಎದುರಿಸಿದ ೪೩ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿ ಶೇ.೧೦೦ ಫಲಿತಾಂಶ ದೊರಕಿದೆ. ಕಾಲೇಜಿನ ರಾಜೇಶ್ವರಿ ಕೆ.ಎಸ್. ವಾಣಿಜ್ಯ ವಿಭಾಗದಲ್ಲಿ ಶೇ.೯೮.೭೫, ನಿತೀಶ್ ಗೌಡ ಹೆಚ್.ಎನ್. ವಿಜ್ಞಾನ ವಿಭಾಗದಲ್ಲಿ ಶೇ. ೯೭.೫ ಹಾಗೂ ಸಿ.ಎ. ಮೋನಿಷಾ ವಿಜ್ಞಾನ ವಿಭಾಗದಲ್ಲಿ ೯೫.೫ ಶೇಕಡ ಅಂಕ ಗಳಿಸಿದ್ದಾರೆ.