ಮಡಿಕೇರಿ, ಏ. ೨೪: ರಾಜ್ಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳಾಗಿ ಜಿಲ್ಲೆಯ ಎರಡು ಕ್ಷೇತ್ರಗಳಿಂದ ಒಟ್ಟು ೨೪ ಮಂದಿ ಅಂತಿಮ ಕಣದಲ್ಲಿ ಉಳಿದುಕೊಂಡಿ ದ್ದಾರೆ. ಮಡಿಕೇರಿ ಕ್ಷೇತ್ರದಿಂದ ೧೫ ಹಾಗೂ ವೀರಾಜಪೇಟೆ ಕ್ಷೇತ್ರದಿಂದ ೯ ಮಂದಿ ಅಂತಿಮ ಕಣದಲ್ಲಿದ್ದು, ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಇಂದು ಮಡಿಕೇರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಆರು ಮಂದಿ ತಮ್ಮ ನಾಮ ಪತ್ರ ಹಿಂಪಡೆದಿದ್ದು, ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ.

ಚುನಾವಣೆಗೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾದಾಗಿನಿAದ ಕೊನೆಯ ದಿನಾಂಕವಾದ ತಾ.೨೦ರವರೆಗೆ ಒಟ್ಟು ೪೩ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮಡಿಕೇರಿ ಕ್ಷೇತ್ರದಿಂದ ೨೨ ಅಭ್ಯರ್ಥಿಗಳಿಂದ ಒಟ್ಟು ೩೧ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೧೦ ಅಭ್ಯರ್ಥಿಗಳಿಂದ ೧೨ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ತಾ.೨೧ರಂದು ನಾಮಪತ್ರ ಪರಿಶೀಲನೆ ವೇಳೆ ಮಡಿಕೇರಿ ಕ್ಷೇತ್ರದಿಂದ ಒಂದು ಹಾಗೂ ವೀರಾಜಪೇಟೆ ಕ್ಷೇತ್ರದಿಂದ ಒಂದು ನಾಮಪತ್ರ ತಿರಸ್ಕೃತಗೊಂಡು ಒಟ್ಟು ೩೦ ಮಂದಿ ಕಣದಲ್ಲಿ ಉಳಿದು ಕೊಂಡಿದ್ದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಆರು ಮಂದಿ ವಾಪಸ್ ಪಡೆಯುವದರೊಂದಿಗೆ ಇದೀಗ ಅಂತಿಮ ಕಣದಲ್ಲಿ ೨೪ ಮಂದಿ ಉಳಿದುಕೊಂಡಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ...,

ಮಡಿಕೇರಿ ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಹಾಲಿ ಶಾಸಕರೂ ಆಗಿರುವ ಎಂ.ಪಿ. ಅಪ್ಪಚ್ಚುರಂಜನ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಾರ್ಟಿಯ ಡಾ. ಮಂಥರ್ ಗೌಡ, ಜನತಾ ದಳ (ಜಾತ್ಯತೀತ)ದ ನಾಪಂಡ ಮುತ್ತಪ್ಪ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಅಮೀನ್ ಮೊಹಿಸಿನ್, ಆಮ್ ಆದ್ಮಿ ಪಾರ್ಟಿಯ ಕೆ.ಪಿ.ಬೋಪಣ್ಣ, ಸಿಪಿಐ ಪಕ್ಷದಿಂದ ಸೋಮಪ್ಪ, ಬಹುಜನ ಸಮಾಜವಾದಿ ಪಕ್ಷದಿಂದ ದಿವಿಲ್‌ಕುಮಾರ್, ಕೆಆರ್‌ಎಸ್ ಪಕ್ಷದಿಂದ ಸಜೀರ್ ಮಜೀದ್ ನೆಲಾಟ್, ಕರ್ನಾಟಕ ಪ್ರಜ್ಞಾವಂತ ಪಾರ್ಟಿಯಿಂದ ಬಿ.ಕೆ. ಶ್ರೀನಿವಾಸ್ ರೈ, ಆರ್‌ಪಿಐ ಪಕ್ಷದಿಂದ ಕೆ.ಬಿ.ರಾಜು, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯಿಂದ ರಶೀದಾ ಬೇಗಂ, ಪಕ್ಷೇತರರುಗಳಾಗಿ ಹರೀಶ್ ಆಚಾರ್ಯ, ಕೆ.ಪಿ. ಶೃತಿ, ಖಲೀಲ್, ಹೇಮಂತ್‌ಕುಮಾರ್ ಅವರುಗಳು ಅಂತಿಮ ಸ್ಪರ್ಧಾಕಣ ದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

ಹಿಂಪಡೆದವರು

ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಪಿ.ಕೆ.ದರ್ಶನ್ ಶೌರಿ, ಅಶ್ರಫ್, ಕೆ.ಎ.ಹಾಶಿಮ್, ವೈ.ಎಂ.ಸಿAಧು, ಹನೀಫ್, ಉಸ್ಮಾನ್ ಅವರುಗಳು ನಾಮಪತ್ರ ವಾಪಸ್ ಪಡೆದು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ವೀರಾಜಪೇಟೆ ಕ್ಷೇತ್ರದಲ್ಲಿ..,

ವೀರಾಜಪೇಟೆ ಕ್ಷೇತ್ರದಲ್ಲಿ ಭಾರತೀಯ

(ಮೊದಲನೇ ಪುಟದಿಂದ) ಜನತಾ ಪಾರ್ಟಿ ಅಭ್ಯರ್ಥಿ, ಹಾಲಿ ಶಾಸಕರೂ ಆಗಿರುವ ಕೆ.ಜಿ.ಬೋಪಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಾರ್ಟಿಯ ಎ.ಎಸ್.ಪೊನ್ನಣ್ಣ, ಜನತಾದಳದ (ಜಾತ್ಯತೀತ) ಎಂ.ಎ.ಮನ್ಸೂರ್ ಆಲಿ, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ಮನು ಸೋಮಯ್ಯ, ಆಮ್ ಆದ್ಮಿ ಪಾರ್ಟಿಯ ಸಿ.ಎಸ್.ರವೀಂದ್ರ, ನಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮಸೂದ್ ಫೌಜ್ದಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಎ.ನಾಸಿರ್, ಪಿ.ಕೆ.ದರ್ಶನ್ ಶೌರಿ, ವಿ.ಎ.ಸಜು ಅಂತಿಮವಾಗಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳಾಗಿದ್ದಾರೆ.

ಮೇ ೧೦ರಂದು ಚುನಾವಣೆ

ಮುಂಬರುವ ಮೇ ತಿಂಗಳ ೧೦ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮತದಾನ ಸುಸೂತ್ರವಾಗಿ ನಡೆಯುವ ಸಂಬAಧ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ೫೪೨ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅಂದು ಬೆಳಿಗ್ಗೆ ೭ ಗಂಟೆಯಿAದ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ತಾ. ೧೩ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿತವಾಗಲಿದೆ.

ಮತ ಎಣಿಕೆಗಾಗಿ ಮಡಿಕೇರಿ ಕ್ಷೇತ್ರದಲ್ಲಿ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆಯಲ್ಲಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ಎಣಿಕಾ ಕೇಂದ್ರ ತೆರೆಯಲಾಗಿದ್ದು, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಣಿಕೆ ನಡೆಯಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಡಾ. ಬಿ.ಸಿ. ಸತೀಶ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಯತೀಶ್ ಉಲ್ಲಾಳ್ ಹಾಗೂ ವೀರಾಜಪೇಟೆ ಕ್ಷೇತ್ರದ ಅಧಿಕಾರಿಯಾಗಿ ಶಬಾನಾ ಎಂ.ಶೇಖ್ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.