ಮಡಿಕೇರಿ, ಏ.೨೪: ಮಡಿಕೇರಿ ನಗರದಲ್ಲಿರುವ ಶ್ರೀ ಓಂಕಾರೇಶ್ವರ ಮತ್ತು ಶ್ರೀ ಆಂಜನೇಯ ದೇವಾಲಯಗಳಲ್ಲಿ ಸಂಪ್ರದಾಯದAತೆ ತಾ. ೨೬ ರಂದು ಬೆಳಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ‘ಪ್ರತಿಷ್ಠಾ ವಾರ್ಷಿಕೋತ್ಸವ’ ವನ್ನು ಹಮ್ಮಿಕೊಳ್ಳಲಾಗಿದೆ.
ದೇವಾಲಯದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಹಯೋಗದಿಂದ ಶ್ರೀ ಗಣಪತಿ ಹೋಮ ಹಾಗೂ ಕಲಶಾಭಿಷೇಕ ಪೂಜೆಗಳು ದೇವಾಲಯದ ವತಿಯಿಂದ ನಡೆಯಲಿದೆ.