ನಾಪೋಕ್ಲು, ಏ. ೨೩: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಮೊದಲ ದಿನದ ಪಂದ್ಯಾಟದಲ್ಲಿ ಚೋಡುಮಾಡ, ಚೊಟ್ಟಂಗಡ, ಮುಂಡಚಾಡಿರ, ಅಮ್ಮಾಟಂಡ, ಕಂಬೀರAಡ, ಪಟ್ಟಡ, ಕಲಿಯಂಡ, ಓಡಿಯಂಡ, ಮೂಕಳೆರ, ಚಿರಿಯಪಂಡ, ಕನ್ನಂಡ, ಮಾಣಿರ ಕುಟುಂಬ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಚೋಡುಮಾಡ ಮತ್ತು ಬಲ್ಯಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೋಡುಮಾಡ ತಂಡವು ಬಲ್ಯಂಡ ತಂಡವನ್ನು ೩೪ ರನ್ಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೊಟ್ಟಗಂಡ ಮತ್ತು ಶಾಂತೆಯAಡ ತಂಡಗಳ ನಡುವಿನ ಪಂದ್ಯದಲ್ಲಿ ಚೊಟ್ಟಗಂಡ ತಂಡವು ಶಾಂತೆಯAಡ ತಂಡವನ್ನು ೩೦ ರನ್ಗಳ ಅಂತರದಿAದ ಪರಾಭವಗೊಳಿಸಿತು. ಆಚೆಯಡ ಮತ್ತು ಮುಂಡಚಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡವು ಆಚೆಯಡ ತಂಡವನ್ನು ೩ ರನ್ಗಳ ಅಂತರದಿAದ ಸೋಲಿಸಿತು.
ಅಮ್ಮಾಟಂಡ ಮತ್ತು ಮುಂಡAಡ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮಾಟಂಡ ತಂಡವು ಸೂಪರ್ ಓವರ್ನಲ್ಲಿ ೧೬ ರನ್ಗಳ ಮುನ್ನಡೆ ಪಡೆದು ಜಯಗಳಿಸಿತು. ಚೆಟ್ರಂಡ ಮತ್ತು ಕಂಬೀರAಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಬೀರAಡ ತಂಡವು ಚೆಟ್ರಂಡ ತಂಡವನ್ನು ೪ ರನ್ಗಳಿಂದ ಪರಾಭವಗೊಳಿಸಿತು. ಪಟ್ಟಡ ಮತ್ತು ಮುಕ್ಕಾಟಿರ (ಅರಪಟ್ಟು) ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಡ ತಂಡವು ಮುಕ್ಕಾಟಿರ ತಂಡವನ್ನು ೨ ರನ್ಗಳ ಅಂತರದಿAದ ಸೋಲಿಸಿ ಗೆಲುವಿನ ನಗೆ ಬೀರಿತು. ನಂಬಿಯಪAಡ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡವು ನಂಬಿಯಪAಡ ತಂಡವನ್ನು ೪ ರನ್ಗಳ ಅಂತರದಿAದ ಸೋಲಿಸಿತು.
ಕರವಂಡ ಮತ್ತು ಓಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡವು ಕರವಂಡ ತಂಡವನ್ನು ೨೬ ರನ್ಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮೂಕಳೆರ ಮತ್ತು ಕಲ್ಲೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೆರ ತಂಡವು ೬೧ ರನ್ಗಳ ಅಂತರದಿAದ ಜಯಭೇರಿ ಭಾರಿಸಿತು. ಚಿರಿಯಪಂಡ ಮತ್ತು ಮಾದೇಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಿರಿಯಪಂಡ ತಂಡವು ೩೭ ರನ್ಗಳ ಅಂತದಿAದ ಜಯಗಳಿಸಿತು. ಪೆಬ್ಬಟ್ಟಿರ ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ ತಂಡವು ೩೭ ರನ್ಗಳ ಅಂತರದಿAದ ಜಯಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಣಿರ ಮತ್ತು ಕುಞಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಣಿರ ತಂಡವು ಕುಞಂಡ ತಂಡವನ್ನು ೫ ರನ್ಗಳ ಅಂತರದಿAದ ಮುನ್ನಡೆಯಿತು.