ಮಡಿಕೇರಿ, ಏ. ೨೩: ರಾಜ್ಯ ವಿಧನಸಭಾ ಚುನಾವಣೆಗೆ ಸಂಬAಧಿಸಿದAತೆ ತಾ. ೨೪ ರಂದು (ಇಂದು) ಈ ಬಾರಿಯ ಅಖಾಡ ಹೇಗಿರಲಿದೆ ಎಂಬ ಕೌತುಕಕ್ಕೆ ಉತ್ತರ ಸಿಗಲಿದೆ. ನಾಮಪತ್ರ ವಾಪಸಾತಿಗೆ ತಾ. ೨೪ ಕೊನೆಯ ದಿನವಾಗಿದ್ದು, ಈ ತನಕ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಯರ‍್ಯಾರು ಅಂತಿಮ ಕಣದಲ್ಲಿ ಉಳಿದುಕೊಳ್ಳಲಿದ್ದಾರೆ. ಯಾರು ನಾಮಪತ್ರ ಹಿಂಪಡೆಯಬಹುದು ಎಂಬ ಕುತೂಹಲ ಮುಂದುವರಿದಿದೆ.

ನಾಮಪತ್ರ ಸಲ್ಲಿಕೆಗೆ ತಾ. ೨೦ ಕೊನೆಯ

(ಮೊದಲನೇ ಪುಟದಿಂದ) ದಿನವಾಗಿದ್ದು, ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಿಂದ ಒಟ್ಟು ೩೨ ಅಭ್ಯರ್ಥಿಗಳು ೪೩ ನಾಮಪತ್ರ ಸಲ್ಲಿಸಿದ್ದರು. ವೀರಾಜಪೇಟೆ ಕ್ಷೇತ್ರದಲ್ಲಿ ೧೦ ಅಭ್ಯರ್ಥಿಗಳಿಂದ ೧೨ ನಾಮಪತ್ರ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ೨೨ ಅಭ್ಯರ್ಥಿಗಳಿಂದ ೩೧ ನಾಮಪತ್ರ ಸಲ್ಲಿಕೆಯಾಗಿದ್ದವು. ತಾ. ೨೧ ರಂದು ನಾಮಪತ್ರ ಪರಿಶೀಲನೆ ಸಂದರ್ಭ ಎರಡೂ ಕ್ಷೇತ್ರದಲ್ಲಿ ತಲಾ ಒಂದೊAದು ನಾಮಪತ್ರ ತಿರಸ್ಕೃತಗೊಂಡಿವೆ. ಉಳಿದ ಎಲ್ಲಾ ಉಮೇದುವಾರಿಕೆ ಕ್ರಮಬದ್ಧವಾಗಿವೆ.

ಇದೀಗ ಸೋಮವಾರ ವಾಪಸಾತಿಗೆ ಕೊನೆಯ ದಿನವಾಗಿದ್ದು, ಕಣದಲ್ಲಿ ಯಾರೆಲ್ಲ ಉಳಿಯಬಹುದು ಎಂಬ ಕೌತುಕ ಜನರಲ್ಲಿದೆ.