ವೀರಾಜಪೇಟೆ, ಏ. ೨೩: ಓರಲ್ ಮೆಡಿಸನ್ ಹಾಗೂ ರೇಡಿಯಾಲಜಿ, ದಂತ ವಿಜ್ಞಾನದಲ್ಲಿ ಎರಡು ಪ್ರಮುಖವಾದ ಮತ್ತು ಪೂರಕವಾದ ವಿಚಾರಗಳಾಗಿವೆ. ಭಾರತದಲ್ಲಿ ಈ ವಿಚಾರಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ ಎಂದು ಕೊಡಗು ದಂತ ಮಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ದಂತ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಷ್ಟçಮಟ್ಟದ ಐಎಒಎಂಆರ್ ಸಂಘದ ಸಹಯೋಗದಲ್ಲಿ ಓರಲ್ ಮೆಡಿಸಿನ್ ಹಾಗೂ ರೇಡಿಯಾಲಜಿ ವಿಷಯ ಆಧರಿಸಿ ನಡೆದ ಎರಡು ದಿನಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡೀನ್ ಡಾ. ಸುನೀಲ್ ಮುದ್ದಯ್ಯ, ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಈ ಸಮಾವೇಶ ನಡೆಸುತ್ತಿರುವುದು ಸಂತಸ ತಂದಿದೆ. ರೋಗವನ್ನೇ ಗುರುತಿಸದೆ ಚಿಕಿತ್ಸೆ ನೀಡುವ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಆದರೆ ‘ಅIಆS’ ವತಿಯಿಂದ ಈ ಎರಡು ವಿಷಯಗಳ ಮೇಲೆ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮುಂಬರುವ ಪೀಳಿಗೆಗೆ ಈ ಎರಡು ವಿಚಾರಗಳು ಅತ್ಯಂತ ಪ್ರಮುಖವಾದ ಅಧ್ಯಯನದ ವಿಚಾರಗಳಾಗಲಿವೆ ಎಂದು ಅಭಿಪ್ರಾಯಪಟ್ಟರು.
ಐಎಒಎಂಆರ್ ಪ್ರಮುಖರಾದ ಡಾ. ಗೋಪಕುಮಾರ್ ಆರ್. ನಾಯರ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಇಂತಹ ಅದ್ಭುತ ಸಮಾವೇಶವನ್ನು ಇಲ್ಲಿ ಆಯೋಜನೆ ಮಾಡಿರುವುದು ಸಂತೋಷ ತಂದಿದೆ. ಓರಲ್ ಮೆಡಿಸನ್ ಹಾಗೂ ರೇಡಿಯಾ ಲಜಿಗೆ ಸಂಬAಧಿಸಿದAತೆ ನಮ್ಮ ದೇಶದಲ್ಲಿ ಸಮರ್ಪಕವಾದ ಸಂಶೋಧನೆಗಳು ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸರಿಯಾದ ಸಂಶೋಧನೆಗಳು ನಡೆದಿದ್ದೇ ಆದಲ್ಲಿ ಬರೀ ಹಲ್ಲಿನ ಆರೋಗ್ಯದ ಬಗ್ಗೆ ಅಧ್ಯಯನ ಮಾಡುವುದಲ್ಲ. ಬಾಯಿಯ ಆರೋಗ್ಯದ ಜೊತೆಗೆ ಆ ಮೂಲಕ ಮನುಷ್ಯನ ಶಾರೀರಿಕ ಆರೋಗ್ಯದ ಬಗ್ಗೆಯೂ ಅರಿಯಲಾಗುತ್ತದೆ ಎಂದರು.
ಈ ಸಂದರ್ಭ ಡಾ. ಪ್ರಶಾಂತ್ ಶೆಣೈ ಹಾಗೂ ದಂತ ಮಹಾ ವಿದ್ಯಾಲಯದ ಮುಖ್ಯಸ್ಥೆ ಡಾ. ಕವಿತಾ ಮಾತನಾಡಿದರು. ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ ಸಮಾವೇಶದ ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಜೈನಿ ಪ್ರಾರ್ಥಿಸಿದರು. ಈ ಸಮಾವೇಶದಲ್ಲಿ ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಜಿತೇಶ್ ಜೈನಿ, ದಂತ ಮಹಾ ವಿದ್ಯಾಲಯದ ಉಪನ್ಯಾಸಕ ವೃಂದದವರು ಸೇರಿದಂತೆ ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶದಿAದ ಸುಮಾರು ೪೦ಕ್ಕೂ ಅಧಿಕ ದಂತ ವೈದ್ಯಕೀಯ ಕಾಲೇಜುಗಳಿಂದ ಪದವೀಧರರು, ಉಪನ್ಯಾಸಕರು ಪಾಲ್ಗೊಂಡರು.
ಸಮಾವೇಶದಲ್ಲಿ ವೈದ್ಯರುಗಳಿಂದ ಓರಲ್ ಮೆಡಿಸನ್ ವಿಷಯ ಮಂಡನೆ, ಚರ್ಚೆ, ಹೀಗೆ ಹಲವಾರು ವೈಜ್ಞಾನಿಕ ಸಂಶೋಧನೆ ವಿಚಾರ ಗಳನ್ನು ಆಧರಿಸಿದ ಚರ್ಚೆ ಹಾಗೂ ಸಂವಾದ ನಡೆಸಲಾಯಿತು. ವಿದ್ಯಾರ್ಥಿಗಳು ಇದರ ಸದುಪ ಯೋಗವನ್ನು ಪಡೆದುಕೊಂಡರು.