(ಅನಿಲ್ ಎಚ್.ಟಿ.)

ಮಡಿಕೇರಿ, ಏ. ೨೩: ಹಲೋ... ಹಲೋ... ಕಂಟ್ರೋಲ್ ರೂಮ್... ೧೯೫೦?

ಎಸ್ ಸರ್.. ಹೇಳಿ ನಿಮ್ಮ ದೂರು..

ಹೀಗೊಂದು ಸಂಭಾಷಣೆ ನಡೆಯುತ್ತಿದ್ದಂತೆಯೇ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಚುನಾವಣಾ ವಿಭಾಗದ ಕಂಟ್ರೋಲ್ ರೂಮ್‌ನಲ್ಲಿ ದೂರು ದಾಖಲು, ಮಾಹಿತಿ ದಾಖಲಾತಿ ಪ್ರಾರಂಭವಾಗುತ್ತದೆ. ಹೆಡ್ ಫೋನ್‌ನೊಂದಿಗೆ ನುರಿತ ಸಿಬ್ಬಂದಿ ಸಾರ್ವಜನಿಕರಿಗೆ ಸಂಬAಧಿಸಿದ ದೂರು, ಸಮಸ್ಯೆಗಳ ಮಾಹಿತಿ ಕ್ರೋಢೀಕರಿಸಲು ಪ್ರಾರಂಭಿಸುತ್ತಾರೆ.

ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಕಂಟ್ರೋಲ್ ರೂಮ್‌ಗೆ ಯಾವುದೇ ದೂರು,

(ಮೊದಲನೇ ಪುಟದಿಂದ) ಮಾಹಿತಿ ನೀಡಬೇಕಾದಲ್ಲಿ ೧೯೫೦ ಸಂಖ್ಯೆಗೆ ಕರೆ ಮಾಡಿದರೆ ತುರ್ತು ಸ್ಪಂದನ ದೊರಕುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ, ಹೆಸರು ಸೇರಿಸಲು ಏನು ಮಾಡಬೇಕು, ಯಾವ ಮತಗಟ್ಟೆಯಲ್ಲಿ ತನ್ನ ಹೆಸರಿದೆ ಎಂಬೆಲ್ಲಾ ಮಾಹಿತಿಗಳು ಕಂಟ್ರೋಲ್ ರೂಮ್‌ನ ೧೯೫೦ ಸಂಖ್ಯೆ ಮೂಲಕ ತಿಳಿಯುತ್ತಿದೆ.

ಸಿದ್ದೇಶ್ವರ ನೋಡಲ್ ಅಧಿಕಾರಿಯಾಗಿರುವ ತಂಡದಲ್ಲಿ ಸೌಮ್ಯ, ಮಾಚಮ್ಮ, ನೀನಾ ಸೇರಿದಂತೆ ಅನೇಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಿ ವಿಜಿಲ್ ಆ್ಯಪ್

ಚುನಾವಣೆಗೆ ಸಂಬAಧಿಸಿದAತೆ ಯಾವುದೇ ದೂರುಗಳು, ಸಮಸ್ಯೆಗಳಿದ್ದಲ್ಲಿ ನಾಗರಿಕರು ಸಿ ವಿಜಿಲ್ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ.

ಆ್ಯಪ್‌ನ ಪ್ರಯೋಜನ ಏನೆಂದರೆ ಇದರಲ್ಲಿ ಘಟನಾ ಸ್ಥಳದಿಂದಲೇ ವೀಡಿಯೋ, ಫೋಟೋಗಳನ್ನು ಅಪ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವಿದ್ದು, ಹೀಗಾಗಿ ನಿಖರವಾದ ದೂರಿನ ಮಾಹಿತಿ ಕಂಟ್ರೋಲ್ ರೂಮ್‌ಗೆ ದೊರಕಲಿದೆ. ಕಂಟ್ರೋಲ್ ರೂಮ್‌ಗೆ ದೂರು ಸಲ್ಲಿಕೆಯಾದ ಕೂಡಲೇ ಚುನಾವಣಾ ಕ್ಷಿಪ್ರಪಡೆಗೆ ಕಂಟ್ರೋಲ್ ರೂಮ್‌ನಿಂದ ಮಾಹಿತಿ ಹೋಗುತ್ತದೆ. ಮಾಹಿತಿ ದೊರಕಿದ ೧೫ ನಿಮಿಷದ ಒಳಗೇ ಕ್ಷಿಪ್ರ ಕಾರ್ಯಪಡೆ ತಂಡ ಘಟನಾ ಸ್ಥಳಕ್ಕೆ ಧಾವಿಸಿ ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ೩೦ ನಿಮಿಷದೊಳಗಾಗಿ ದೂರಿನ ಬಗ್ಗೆ ಕ್ಷಿಪ್ರ ಕಾರ್ಯಪಡೆ ವಿಚಾರಣೆ ನಡೆಸಿ ಕಂಟೋಲ್ ರೂಮ್‌ಗೆ ಮಾಹಿತಿ ನೀಡುತ್ತದೆ. ದೂರಿಗೆ ಸಂಬAಧಿಸಿದAತೆ ಕೈಗೊಂಡ ಕ್ರಮಗಳ ಬಗ್ಗೆ ಚುನಾವಣಾಧಿಕಾರಿಗಳ ಗಮನಕ್ಕೆ ಕಂಟ್ರೋಲ್ ರೂಮ್‌ನಿಂದ ಮಾಹಿತಿ ಹೋಗುತ್ತದೆ. ಈ ಪ್ರಕ್ರಿಯೆಯು ೧೦೦ ನಿಮಿಷದೊಳಗಾಗಿ ಮುಕ್ತಾಯಗೊಳ್ಳಬೇಕಾಗಿದ್ದು, ದೂರು ಸಲ್ಲಿಕೆಯಾದ ಒಂದೂ ಮುಕ್ಕಾಲು ಗಂಟೆಯೊಳಗಾಗಿ ದೂರಿಗೆ ಸಂಬAಧಿಸಿದAತೆ ಕ್ರಮಕೈಗೊಳ್ಳಲಾಗುತ್ತದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಸಿ ವಿಜಿಲ್ ಆ್ಯಪ್‌ನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ದಿನದ ೨೪ ಗಂಟೆಯೂ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸಿ ವಿಜಿಲ್ ಆ್ಯಪ್‌ಗೆ ದೂರುಗಳು ಸಲ್ಲಿಕೆಯಾಗುತ್ತದೆ. ಈಗಾಗಲೇ ಕೊಡಗಿನಲ್ಲಿ ಸಿವಿಜಿಲ್ ಆ್ಯಪ್ ಮೂಲಕ ೧೮ ದೂರುಗಳು ಸಲ್ಲಿಕೆಯಾಗಿದೆ.

ಗಮನಾರ್ಹ ಎಂದರೆ ಯಾವುದೇ ದೂರುದಾರ ತನ್ನ ಹೆಸರನ್ನು ಗೌಪ್ಯವಾಗಿರಿಸಬೇಕು ಎಂದಾದಲ್ಲಿ ಆ್ಯಪ್‌ನಲ್ಲಿ ಹೆಸರಿನ ಸ್ಥಳವನ್ನು ಭರ್ತಿ ಮಾಡದಿದ್ದರೆ ಆಯಿತು. ಆದರೆ ದೂರಿನ ಸಂಬAಧಿತ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿಯು ದೂರುದಾರನಿಗೆ ದೊರಕುವುದಿಲ್ಲ. ಹೆಸರು ನಮೂದಿಸಿದ್ದಲ್ಲಿ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ಸಿ ವಿಜಿಲ್ ಆ್ಯಪ್ ಅತ್ಯಂತ ಸುರಕ್ಷಿತ ಮತ್ತು ಯಾವುದೇ ದೂರಿನ ಬಗ್ಗೆ ನಿರ್ಭೀತಿಯಿಂದ ನಾಗರಿಕರು ಮಾಹಿತಿ ನೀಡಲು ಅತ್ಯಂತ ಸೂಕ್ತವಾಗಿದೆ.

ಮಡಿಕೇರಿಯ ಚುನಾವಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿಯೇ ಇರುವ ಕಂಟ್ರೋಲ್ ರೂಮ್‌ಗೆ ಹೊಂದಿಕೊAಡAತೆ ಸ್ಥಾಪಿಸಲಾಗಿರುವ ಸಿ ವಿಜಿಲ್ ಆ್ಯಪ್ ಕೇಂದ್ರದಲ್ಲಿ ವಿರೂಪಾಕ್ಷ ನೋಡಲ್ ಅಧಿಕಾರಿಯಾಗಿದ್ದು, ರಾಹುಲ್, ತೌಸಿಫ್, ಎಸ್. ರಾಧಾ, ರೋಜಾ ಕಾರ್ಯನಿರ್ವಹಿಸುತ್ತಿದ್ದಾರೆ.

ಚುನಾವಣಾ ಲೆಕ್ಕ ಪತ್ರ ಕೇಂದ್ರ

ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದAತೆ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳು ನಡೆಸುವ ವೆಚ್ಚಗಳ ಬಗ್ಗೆ ಹದ್ದುಗಣ್ಣನ್ನು ಲೆಕ್ಕಪತ್ರ ವಿಭಾಗ ಇರಿಸಿದೆ.

ಪ್ರತೀ ಅಭ್ಯರ್ಥಿಗೆ ಚುನಾವಣಾ ಆಯೋಗವು ೪೦ ಲಕ್ಷ ರೂಪಾಯಿ ವೆಚ್ಚದ ಮಿತಿ ನಿಗದಿಪಡಿಸಿದೆ. ರಾಜಕೀಯ ಪಕ್ಷಗಳಿಗೆ ಲೆಕ್ಕದ ಮಿತಿ ಇಲ್ಲ. ಆದರೆ ರಾಜಕೀಯ ಪಕ್ಷಗಳ ವೇದಿಕೆಯಲ್ಲಿ ಅಭ್ಯರ್ಥಿಯು ಕಾಣಿಸಿಕೊಂಡದ್ದೇ ಆದಲ್ಲಿ ಅಂಥ ಕಾರ್ಯಕ್ರಮದ ಒಟ್ಟು ವೆಚ್ಚ ಅಭ್ಯರ್ಥಿಯ ಲೆಕ್ಕಕ್ಕೆ ಜಮೆಯಾಗುತ್ತದೆ.

ಲೆಕ್ಕದ ವಿಚಾರದಲ್ಲಿ ಈ ಕೇಂದ್ರ ಪಕ್ಕಾ ಇದೆ. ಉದಾಹರಣೆಗೆ - ರಾಜಕೀಯ ಸಮಾರಂಭವೊAದರಲ್ಲಿ ವಿನಿಯೋಗವಾಗುವ ಪ್ರತಿಯೊಂದು ಖರ್ಚಿನ ಬಗ್ಗೆ ಪೂರ್ವ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಮೊದಲೇ ಪಟ್ಟಿ ಮಾಡಿಕೊಂಡು ದಾಖಲು ಮಾಡಿರುತ್ತಾರೆ. ಹೀಗಾಗಿ ಸಮಾರಂಭವೊAದಕ್ಕೆ ಬಳಸಲಾಗುವ ಕುರ್ಚಿಗೆ ತಲಾ ೪ ರೂ. ನಂತೆ ವೆಚ್ಚ ನಿಗದಿಮಾಡಲಾಗಿದ್ದು. ೪೦೦ ಕುರ್ಚಿಗಳನ್ನು ಸಮಾರಂಭಕ್ಕೆ ಬಳಕೆ ಮಾಡಿದ್ದಲ್ಲಿ ತಲಾ ೪ ರೂ.ನಂತೆ ಕುರ್ಚಿಗಳ ವೆಚ್ಚವೇ ೧೬೦೦ ರೂ.ಗಳಾಗಲಿದೆ. ಬೋರ್ಡ್, ಫ್ಲೆಕ್ಸ್, ವೇದಿಕೆಯ ಟೇಬಲ್, ಕುಡಿಯುವ ನೀರು, ವೇದಿಕೆಯಲ್ಲಿ ಕುಳಿತವರು ಬಳಸಿದ ಶಲ್ಯ, ಪೇಟ, ಹಾರ, ಶರ್ಟ್, ಟೀಶರ್ಟ್, ಕಾಲರ್ ಇರುವ ಶರ್ಟ್.. ಹೀಗೆ.. ಎಲ್ಲದಕ್ಕೂ ವೆಚ್ವ ನಿಗದಿಯಾಗಿದ್ದು, ಇದೆಲ್ಲದರ ವೆಚ್ಚದ ಲೆಕ್ಕವು ಲೆಕ್ಕಪತ್ರ ಕೇಂದ್ರದಲ್ಲಿ ನಮೂದಾಗುತ್ತಿರುತ್ತದೆ. ಚುನಾವಣೆ ಮುಕ್ತಾಯವಾದ ಮೇಲೆ ಪ್ರತಿಯೋರ್ವ ಅಭ್ಯರ್ಥಿಯೂ ವೆಚ್ಚ ಮಾಡಿದ ಮಾಹಿತಿಯನ್ನು ಕ್ರೋಢೀಕರಿಸಿ ೪೦ ಲಕ್ಷ ರೂ. ಒಳಗಿದೆಯೇ ಎಂದು ಪರಿಶೀಲಿಸಲಾಗುತ್ತದೆ.

ಅಂತೆಯೇ ಚುನಾವಣಾ ದಿನಗಳಲ್ಲಿ ಅಕ್ರಮವಾಗಿ ದೊರಕುವ ನಗದು, ಕೊಡುಗೆಗಳ ಬಗ್ಗೆಯೂ ಈ ಕೇಂದ್ರದಲ್ಲಿ ಲೆಕ್ಕ ಇರಿಸಲಾಗುತ್ತಿದೆ. ಚೆಕ್‌ಪೋಸ್ಟ್ಗಳಲ್ಲಿ ಪರಿಶೀಲನೆ ಸಂದರ್ಭ ದಾಖಲಾತಿಯಿಲ್ಲದೆ ಕೊಂಡೊಯ್ಯುವ ನಗದನ್ನು ಈ ಕೇಂದ್ರದಲ್ಲಿ ದಾಖಲಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಈವರೆಗೆ ಅಂದರೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್ ೨೯ ರಿಂದ ಏಪ್ರಿಲ್ ೨೦ ರವರೆಗಿನ ಮಾಹಿತಿಯಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ರೂ. ೨೨ ಲಕ್ಷ ವೀರಾಜಪೇಟೆ ಕ್ಷೇತ್ರದಲ್ಲಿ ರೂ. ೮.೩೨ ಲಕ್ಷ ನಗದು ಸೇರಿದಂತೆ ೩೦ ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೂಕ್ತ ದಾಖಲಾತಿ ದೊರಕಿದ ಹಿನೆÀ್ನಲೆಯಲ್ಲಿ ೧೩ ಲಕ್ಷ ರೂ. ನಗದನ್ನು ಸಂಬAಧಿಸಿದವರಿಗೆ ಹಿಂದಿರುಗಿಸಲಾಗಿದ್ದು, ೪ ಲಕ್ಷ ರೂ. ನಗದು ವಶಕ್ಕೆ ಸಂಬAಧಿಸಿದAತೆ ವಿಚಾರಣೆ ಬಾಕಿಯಿದೆ.

ಲೆಕ್ಕಪತ್ರ ಸಂಬAಧಿತ ಅಧಿಕಾರಿಯಾದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆಕಾಶ್ ನೇತೃತ್ವದಲ್ಲಿ ಸಭೆ ನಡೆಸಿ ದಾಖಲಾತಿ ಪರಿಶೀಲಿಸಲಾಗುತ್ತದೆ.

ಲೆಕ್ಕಪತ್ರಕ್ಕೆ ಸಂಬAಧಿಸಿದAತೆ ಸಿದ್ದರಾಜು, ಬಶೀರ್ ನೇತೃತ್ವದ ತಂಡ ಎರಡೂ ಕ್ಷೇತ್ರಗಳಲ್ಲಿ ಉಸ್ತುವಾರಿ ಹೊಂದಿದ್ದು, ಮಡಿಕೇರಿ ವಿಭಾಗದಲ್ಲಿ ಆನಂದ್ ನೇತೃತ್ವದಲ್ಲಿ ಪ್ರವೀಣ್, ಗನಾವತಿ, ಪ್ರೇಮ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಪರಿಶೀಲನಾ ಕೇಂದ್ರ

ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ಅಪಪ್ರಚಾರ ಹೆಚ್ಚಾಗುತ್ತಿರುವುದರಿಂದಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗ ಅಧಿಕಾರಿಗಳ ಮೂಲಕ ಹದ್ದಿನ ಕಣ್ಣಿಟ್ಟಿದೆ.

ಮಡಿಕೇರಿಯಲ್ಲಿನ ಸಾಮಾಜಿಕ ಜಾಲತಾಣಗಳ ಕೇಂದ್ರದಲ್ಲಿ ದಿನದ ೨೪ ಗಂಟೆಯೂ ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್ ವಾಟ್ಸಪ್, ಟ್ವಿಟರ್, ಟೆಲಿಗ್ರಾಮ್‌ಗಳ ಪರಿಶೀಲನೆ ನಡೆಯುತ್ತಲೇ ಇದೆ. ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಅಭ್ಯರ್ಥಿಯು ಸೂಕ್ತ ಮಾಹಿತಿ ನೀಡದೆ ಅನುಮತಿ ಪಡೆಯದೇ ಮಾಹಿತಿಯ ಪೋಸ್ಟ್ ಹಾಕಿದ್ದೇ ಆದಲ್ಲಿ ಕೂಡಲೇ ಅಂಥವರಿಗೆ ನೋಟೀಸ್ ನೀಡಲಾಗುತ್ತದೆ. ಅಂತೆಯೇ ಯಾವದೇ ದೂರುಗಳು ಬಂದಲ್ಲಿ ಅಂಥ ಸೋಷಿಯಲ್ ಮೀಡಿಯಾಗಳನ್ನು ಪರಿಶೀಲಿಸಿ ತನಿಖೆಗೊಳಪಡಿಸಲಾಗುತ್ತಿದೆ. ಕೊಡಗಿನಲ್ಲಿ ಈವರೆಗೆ ೩೩ ದೂರುಗಳು ಸಲ್ಲಿಕೆಯಾಗಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ರವಿಶಂಕರ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣಗಳ ಪರಿಶೀಲನಾ ಕೇಂದ್ರದಲ್ಲಿ ಸೋಮಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮಾಧ್ಯಮ ನಿರ್ವಹಣಾ ಕೋಶ

ಕೊಡಗು ಜಿಲ್ಲೆಯ ಮಾಧ್ಯಮ, ಪತ್ರಿಕೆಗಳಲ್ಲಿ ಪ್ರಸಾರವಾಗುವ, ಪ್ರಕಟಿತಗೊಳ್ಳುವ ಸುದ್ದಿ, ಚಿತ್ರಗಳು, ಲೇಖನಗಳ ಮೇಲೆ ಈ ವಿಭಾಗ ಕಣ್ಣಿರಿಸಿದೆ. ಯಾವುದೇ ಅಭ್ಯರ್ಥಿಯು ಸೂಕ್ತ ಮಾಹಿತಿ ನೀಡದೇ ಅನುಮತಿ ಪಡೆಯದೇ ತನ್ನ ಪರವಾಗಿ ಲೇಖನಗಳನ್ನು ಪ್ರಕಟಿಸಿದರೆ, ಟಿವಿ, ಪತ್ರಿಕೆಗಳಲ್ಲಿ ಅಂಥಹವು ಪ್ರಸಾರವಾದಲ್ಲಿ, ಯಾವುದೇ ಮಾನಹಾನಿ ಸಂಬAಧಿತ ಸುದ್ದಿಗಳು ಕಂಡುಬAದಲ್ಲಿ ಮಾಧ್ಯಮ ದೃಢೀಕರಣ ಕೋಶವು ಚುನಾವಣಾಧಿಕಾರಿಗೆ ಈ ಸಂಬAಧಿತ ಕ್ರಮಕ್ಕೆ ಶಿಫಾರಸ್ಸು ಮಾಡಿ ಕ್ರಮಕೈಗೊಳ್ಳಲು ಕಾರಣವಾಗುತ್ತದೆ.

ಈ ಕೇಂದ್ರವಿರುವ ಕೋಣೆಯಲ್ಲಿ ೬ ಟಿವಿಗಳನ್ನು ಇರಿಸಲಾಗಿದ್ದು, ಸಿಬ್ಬಂದಿಗಳು ಟಿವಿಗಳಲ್ಲಿ ಪ್ರಸಾರವಾಗುವ ಸುದ್ದಿ, ಜಾಹೀರಾತುಗಳನ್ನು ವೀಕ್ಷಿಸುತ್ತಿರುತ್ತಾರೆ. ಅಂತೆಯೇ ಎಲ್ಲಾ ಪತ್ರಿಕೆಗಳನ್ನು ದಿನನಿತ್ಯ ಪರಿಶೀಲನೆಗೊಳಪಡಿಸುತ್ತಾರೆ.

ಲೇಖನ, ಸುದ್ದಿ ಜಾಹೀರಾತು, ಮುದ್ರಣಕ್ಕೆ ಸಂಬAಧಿತ ಯಾವುದೇ ದೂರುಗಳು ಬಂದಲ್ಲಿ ಮಾಧ್ಯಮ ದೃಢೀಕರಣ ಕೋಶವು ಕಾರ್ಯಪ್ರವೃತ್ತವಾಗಿ ಸಂಬAಧಿತ ಅಧಿಕಾರಿಗಳಿಗೆ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರ ಅಧ್ಯಕ್ಷತೆಯ ತಂಡದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಬಾಲರಾಜ್ ರಂಗರಾವ್ ಜಿಲ್ಲಾ ವಾರ್ತಾಧಿಕಾರಿ, ಸಿಂಧು, ನಯನ, ರಘುರಾಮ್, ರಾಜು, ವಿಜಯ ಅಂಗಡಿ, ಇಳಯರಾಜ, ಸುಮ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಚುನಾವಣಾ ವಿಭಾಗದ ಈ ವಿಭಾಗಗಳು ದಿನದ ೨೪ ಗಂಟೆಯೂ ತೆರೆದಿದ್ದು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಚುನಾವಣೆಯೊಂದು ಸುಸೂತ್ರವಾಗಿ ನಡೆಯಲು ಅನೇಕರ ಶ್ರಮವಿದೆ. ಹಲವಾರು ವಿಭಾಗಗಳಲ್ಲಿ ತಂಡೋಪತAಡವಾಗಿ ಅಧಿಕಾರಿ, ಸಿಬ್ಬಂದಿಗಳು ಅವಿರತ ಕಾರ್ಯನಿರ್ವಹಿಸುತ್ತಿರುತ್ತಾರೆ.

ಚುನಾವಣಾ ಫಲಿತಾಂಶ ಓರ್ವ ಅಭ್ಯರ್ಥಿಯ ಗೆಲುವಿಗೆ ಕಾರಣವಾಗುತ್ತದೆ.

ಆದರೆ ಚುನಾವಣೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆದಲ್ಲಿ ಇಂತಹ ಅಧಿಕಾರಿಗಳು, ಸಿಬ್ಬಂದಿಗಳು ಗೆಲವು ಅದಾಗಲಿದೆ.