ನಾಪೋಕ್ಲು, ಏ. ೨೨: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವಕ್ಕೆ ಇಂದು ನಾಪೋಕ್ಲುವಿನಲ್ಲಿ ಸಂಭ್ರಮದ ಚಾಲನೆ ದೊರೆಯಿತು. ೨೧ನೇಯ ವರ್ಷದ ಕ್ರಿಕೆಟ್ ನಮ್ಮೆಯನ್ನು ನಾಪೋಕ್ಲು - ನೆಲಜಿ ವಿಭಾಗದವರಾದ ಬಾಳೆಯಡ ಕುಟುಂಬಸ್ಥರು ಈ ಬಾರಿ ಆಯೋಜಿಸಿದ್ದಾರೆ.

ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೆ ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ ನಡೆದಿದ್ದು, ಇದೀಗ ಇದೇ ಮೈದಾನದಲ್ಲಿ ಬಾಳೆಯಡ ಕಪ್ ಕ್ರಿಕೆಟ್ - ೨೦೨೩ ಶುಭಾರಂಭ ಗೊಂಡಿದ್ದು, ನಾಪೋಕ್ಲುವಿನಲ್ಲಿ ಮತ್ತೊಮ್ಮೆ ಕ್ರೀಡಾಕಲರವ ಆರಂಭಗೊAಡಿದೆ.

ಇAದು ಉದ್ಘಾಟನಾ ಸಮಾರಂಭ ನಡೆದಿದ್ದು, ಬಾಳೆಯಡ ಕುಟುಂಬಸ್ಥರು ಅದ್ಧೂರಿಯ ಚಾಲನೆ ನೀಡಿದರು. ಈ ಬಾರಿ ಇಷ್ಟು ವರ್ಷಗಳಲ್ಲಿನ ದಾಖಲೆ ಎಂಬAತೆ ೨೫೨ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.

ಪ್ರಾಕೃತಿಕ ವಿಕೋಪ ಮತ್ತು ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಡವ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟ ಕಳೆದ ವರ್ಷದಿಂದ ಮತ್ತೆ ತನ್ನ ಗತವೈಭವದತ್ತ ಸಾಗುತ್ತಿರುವದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ಮೂಡಿಸಿದೆ.

ಬಾಳೆಯಡ ಕುಟುಂಬದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಪಿನೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸುವದರ ಮೂಲಕ ಕ್ರಿಕೆಟ್ ನಮ್ಮೆಗೆ ಸಾಂಪ್ರದಾಯಿಕ ಸ್ಪರ್ಶ ನೀಡಲಾಯಿತು. ದುಡಿಕೊಟ್ಟ್ ಪಾಟ್ ಸಹಿತವಾಗಿ ದುಡಿಕೊಟ್ಟ್ ಪಾಟ್ ಮೂಲಕ ಮುಖ್ಯ ಅತಿಥಿಗಳನ್ನು, ಗಣ್ಯರನ್ನು ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು. ನಂತರ ಕೊಡವ ಕ್ರಿಕೆಟ್ ಅಕಾಡೆಮಿ ಮತ್ತು ಬಾಳೆಯಡ ಕುಟುಂಬಸ್ಥರ ಧ್ವಜಾರೋಹಣದ ಮೂಲಕ ಕ್ರಿಕೆಟ್ ನಮ್ಮೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ವೇದಿಕೆ ಕಾರ್ಯಕ್ರಮವನ್ನು ಬಾಳೆಯಡ ಕುಟುಂಬದ ಅಧ್ಯಕ್ಷ ಮಂದಪ್ಪ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ- ಕೇರಳ ರಾಜ್ಯದ ಆಡಳಿತಾತ್ಮಕ ಮುಖ್ಯಸ್ಥ ಕರ್ನಲ್ ಮಾಚಿಮಂಡ ಮುತ್ತಪ್ಪ ಕೊಡವ ಹಾಕಿ ನಮ್ಮೆಯ ಹಾಗೆ ಕ್ರ‍್ರಿಕೆಟ್ ನಮ್ಮೆ ಕೂಡ ಇತಿಹಾಸದ ಒಂದು ಭಾಗವಾಗಿದೆ. ಕೊಡವರಲ್ಲಿ ಕ್ರೀಡೆ ಮತ್ತು ಸೇನಾ ಪರಂಪರೆ ರಕ್ತಗತವಾಗಿ ಬಂದಿದೆ. ಕ್ರೀಡೆ ಮಕ್ಕಳ ವೃತ್ತಿ ಬದುಕಿಗೆ, ಮುಂದಿನ ಭವಿಷ್ಯಕ್ಕೆ ದಾರಿ ದೀಪವಾಗಿದೆ ಎಂದರು. ಕ್ರೀಡಾ ಕೂಟಗಳಿಂದ ಕುಟುಂಬಗಳ ನಡುವೆ ಸಂಬAಧ ವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಮಹಾವೀರ ಚಕ್ರ ಪುರಸ್ಕೃತ ನಿವೃತ್ತ ಸೇನಾಧಿಕಾರಿ ಪುಟ್ಟಿಚಂಡ ಗಣಪತಿ ಮಾತನಾಡಿ ಕೊಡವರು ಕೆಳಮಟ್ಟ ದಲ್ಲಿರುವ ಜನಾಂಗದ ಅಭಿವೃದ್ಧಿಗೆ ಸಹಕಾರ

(ಮೊದಲ ಪುಟದಿಂದ) ನೀಡಬೇಕು. ಉನ್ನತ ಸ್ಥಾನದಲ್ಲಿರು ವವರು ಜನಾಂಗದ ಏಳಿಗೆಯತ್ತ ಗಮನ ಹರಿಸಬೇಕು. ಸಹಾಯ ಮತ್ತು ಸಹಕಾರಕ್ಕೆ ಅವರನ್ನು ಸಂಪರ್ಕಿಸಲು ಜನಾಂಗದ ಯುವ ಪೀಳಿಗೆ ಮುಜುಗರ ಪಡಬಾರದು ಎಂದು ಕಿವಿಮಾತು ಹೇಳಿದರು. ಕೊಡವ ಕೌಟುಂಬಿಕ ಕ್ರೀಡಾ ಕೂಟಗಳು ಜನಾಂಗದ ಒಗ್ಗಟ್ಟಿಗೆ ಸಹಕಾರಿ ಯಾಗಿದೆ. ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟಗೊಂದಿಗೆ ಫುಟ್ಬಾಲ್, ವಾಲಿಬಾಲ್ ಸೇರ್ಪಡೆಗೊಂಡರೆ ಜನಾಂಗದ ನಡುವೆ ಹೆಚ್ಚಿನ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮತ್ತೋರ್ವ ಅತಿಥಿಯಾಗಿದ್ದ ಮಾಜಿ ಒಲಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ಮಾತನಾಡಿ ಮಕ್ಕಳ ಸಾಧನೆಗೆ ತಂದೆ, ತಾಯಿ ಕುಟುಂಬಸ್ಥರ ಪ್ರೋತ್ಸಾಹ ಅಗತ್ಯ. ಅವರು ತಮ್ಮ ಮಕ್ಕಳ ಬಗ್ಗೆ ಕನಸು ಕಾಣುವುದರೊಂದಿಗೆ ಮಕ್ಕಳ ಕನಸ್ಸನ್ನು ನನಸು ಮಾಡಲು ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು. ಹಾಕಿ ಮಾತ್ರವಲ್ಲ ಕ್ರಿಕೆಟ್‌ನಲ್ಲಿಯೂ ಕೊಡಗು ಹೆಸರು ಗಳಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪರ್ವತಾರೋಹಿ ಜಮ್ಮಡ ಪ್ರೀತ್ ಅಯ್ಯಪ್ಪ ಮಾತನಾಡಿ ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿ ರಬಾರದು. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳು ವದರ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ ದರು. ಅಧ್ಯಕ್ಷತೆಯನ್ನು ಬಾಳೆಯಡ ಕುಟುಂಬದ ಅಧ್ಯಕ್ಷ ಮಂದಪ್ಪ ವಹಿಸಿದ್ದರು. ಕ್ರೀಡಾಕೂಟದ ಮಾಜಿ ಒಲಂಪಿಯನ್ ಅಧ್ಯಕ್ಷ ನಿವೃತ್ತ ಕರ್ನಲ್ ಬಾಳೆಯಡ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರದರ್ಶನ ಪಂದ್ಯ

ಉದ್ಘಾಟನಾ ಸಮಾರಂಭದ ಅಂಗವಾಗಿ ಜೋಮಾಲೆ ಮಹಿಳಾ ತಂಡ ಚೆಟ್ಟಳ್ಳಿ ಮತ್ತು ಸಂಭ್ರಮ ಮಹಿಳಾ ತಂಡ ಟಿ ಶೆಟ್ಟಿಗೇರಿ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದ ಉದ್ಘಾಟನೆಯನ್ನು ಪುಟ್ಟಿಚಂಡ ಗಣಪತಿ ನೆರವೇರಿಸಿದರು. ನಾಪೋಕ್ಲು ಅಂಕುರ್ ಪಭ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ರಾಷ್ಟçಗೀತೆ, ತಲಕಾವೇರಿಕ್ ತಿಂಗಕೋರ್ ಮೊಟ್ಟ್ ತಂಡದಿAದ ಕೋಲಾಟ್, ಕತ್ತಿಯಾಟ್ ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ಕ್ರೀಡಾಪಟು ಅಚ್ಚಕಾಳೆರ ಪಳಂಗಪ್ಪ, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ, ಕುಲ್ಲೇಟಿರ ಅರುಣ್ ಬೇಬಾ. ಮಾಳೇಟಿರ ಅಂಜು ಮತ್ತಿತರರಿದ್ದರು. ಬಾಳೆಯಡ ಶಿಶಿರ್ ಬೆಳ್ಯಪ್ಪ ಮತ್ತು ಬಿಷನ್ ಬಿದ್ದಪ್ಪ ಪ್ರಾರ್ಥನೆ, ಬಾಳೆಯಡ ಕರುಣ್ ಕಾಳಪ್ಪ ಸ್ವಾಗತ, ಚೆಪ್ಪುಡಿರ ಕಾರ್ಯಪ್ಪ ಮತ್ತು ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ಕಾರ್ಯದರ್ಶಿ ಬಾಳೆಯಡ ಸದಾ ಕುಶಾಲಪ್ಪ ವಂದಿಸಿದರು.

-ಪಿ.ವಿ.ಪ್ರಭಾಕರ್, ದುಗ್ಗಳ ಸದಾನಂದ