ಸಿದ್ದಾಪುರ, ಏ. ೨೨: ಸಿದ್ದಾಪುರದ ಕಂಬೀರAಡ ಎ. ನಂಜಪ್ಪ ಶ್ರೀ ಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ನಡೆಸಿದ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಉತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಗಣಪತಿ ಹೋಮದೊಂದಿಗೆ ನಡೆದ ಪೂಜಾ ಕಾರ್ಯಗಳಾದ ಬಿಂಬಶುದ್ಧಿ, ಶುದ್ಧ ಕಲಶ, ಉಷಾ ಪೂಜೆ, ಚಂಡಿಕಾಯಾಗ ಭಂಡಾರ ತರುವ ಕಾರ್ಯ ನಡೆಯಿತು.
ಚಂಡಿಕಾಯಾಗದ ಪೂರ್ಣಾಹುತಿ ಮಹಾಪೂಜೆ ಬಳಿಕ ತಾಯಂಬಕ ಹಾಗೂ ಕೇರಳ ಪ್ರಸಿದ್ಧ ಚಂಡೆಯವರಿAದ ಆಕರ್ಷಕ ಚಂಡೆ ವಾದ್ಯ ನಡೆಯಿತು. ಇದಾದ ಬಳಿಕ ಸಿದ್ದಾಪುರದ ಭಾರತೀಯ ನೃತ್ಯ ಕಲಾ ಶಾಲಾ ಮಕ್ಕಳಿಂದ ವಿವಿಧ ಭರತನಾಟ್ಯ ನೃತ್ಯ ಕಾರ್ಯಕ್ರಮವು ಜರುಗಿತು. ರಾತ್ರಿ ಮಹಾಮಂಗಳಾರತಿ ನಂತರ ಶ್ರೀ ಚಾಮುಂಡೇಶ್ವರಿ ದೇವರ ಪ್ರಸಾದ ವಿತರಣೆ ದೇವರ ನರ್ತನ, ಮಂತ್ರಾಕ್ಷತೆ ನಡೆಯಿತು. ರಾತ್ರಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ನೋಡುಗರ ಮನಸೂರೆಗೊಂಡಿತ್ತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿತ್ತಾಲಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಹಾಜರಿದ್ದರು.