ಭಾಗಮಂಡಲ, ಏ. ೨೨: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ೨೦೨೩ ಶನಿವಾರದ ಪಂದ್ಯಗಳಲ್ಲಿ ಕುಡೆಕಲ್ ಮತ್ತು ಕೆದಂಬಾಡಿ ತಂಡಗಳು ಮುಂದಿನ ಹಂತ ಪ್ರವೇಶಿಸಿದವು.
ಮೊದಲ ಪಂದ್ಯದಲ್ಲಿ ಪಾಲಾರಿ ಮೂಲೆ ತಂಡವು ಕೆದಂಬಾಡಿ ತಂಡದ ವಿರುದ್ಧ ೨೩ ರನ್‌ಗಳ ಜಯಗಳಿಸಿತು. ಪಾಲಾರಿ ಮೂಲೆ ತಂಡವು ಮೂರು ವಿಕೆಟ್ ನಷ್ಟಕ್ಕೆ ೭೧ ರನ್ ಗಳಿಸಿದರೆ ಕೆದಂಬಾಡಿ ತಂಡ ಐದು ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿತು.
ಸೂದನ ಮತ್ತು ಯಾಪರೆ ತಂಡಗಳ ನಡುವಿನ ಪಂದ್ಯದಲ್ಲಿ ಯಾಪರೆ ತಂಡ ಮೂರು ವಿಕೆಟ್ ನಷ್ಟಕ್ಕೆ ೩೫ ರನ್‌ಗಳಿಸಿ ಗೆಲುವು ಸಾಧಿಸಿತು. ಸೂದನ ತಂಡ ಆರು ವಿಕೆಟ್ ನಷ್ಟಕ್ಕೆ ೩೪ ರನ್‌ಗಳಿಸಿ ಸೋಲು ಅನುಭವಿಸಿತು.
ಐಯ್ಯಂಡ್ರ ತಂಡ ಕುಡೆಕಲ್ ವಿರುದ್ಧ ಸ್ಪರ್ಧಿಸಿತು. ಐಯ್ಯಂಡ್ರ ನಾಲ್ಕು ವಿಕೆಟ್ ನಷ್ಟಕ್ಕೆ ೬೬ ರಂದು ಗಳಿಸಿದರೆ ಕುಡೆಕಲ್ ಎಂಟು ವಿಕೆಟ್‌ಗಳ ಜಯ ಸಾಧಿಸಿತು.
ನಡುವಟ್ಟೀರ ಮತ್ತು ಅಂಚೆಮನೆ ತಂಡಗಳ ನಡುವಿನ ಪಂದ್ಯದಲ್ಲಿ ಅಂಚೆಮನೆ ೩೪ ರನ್ ಗಳಿಸಿ ೯ ವಿಕೆಟ್‌ಗಳ ಗೆಲುವು ಸಾಧಿಸಿತು. ಪಾಲರಿ ಮೂಲೆ ಮತ್ತು ಯಾಪರೆ ತಂಡಗಳ ನಡುವಿನ ಪಂದ್ಯದಲ್ಲಿ ಪಾಲಾರಿಮೂಲೆ ತಂಡ ಏಳು ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿದರೆ ಯಾಪರೆ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೨ ರನ್ ಗಳಿಸಿ ಗೆಲುವು ಸಾಧಿಸಿತು.
ಕುಡೆಕಲ್ ತಂಡ ಅಂಚೆಮನೆ ತಂಡದ ವಿರುದ್ಧ ೪೫ ರನ್‌ಗಳ ಗೆಲುವು ಸಾಧಿಸಿದರೆ, ಯಾಪರೆ ತಂಡದ ವಿರುದ್ಧ ೪೩ ರನ್‌ಗಳ ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿತು ಮುಂದಿನ ಪಂದ್ಯದಲ್ಲಿ ಕೆದಂಬಾಡಿ ತಂಡ ಕಡಪಲ ತಂಡದ ವಿರುದ್ಧ ಸ್ಪರ್ಧಿಸಿತು. ಕಡಪಾಲ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಸಿದರೆ ಕೆದಂಬಾಡಿ ತಂಡ ಮೂರು ವಿಕೆಟ್ ನಷ್ಟಕ್ಕೆ ೮೭ ರನ್ ಗಳಿಸಿ ೪೧ ರನ್‌ಗಳ ಜಯ ಸಾಧಿಸಿತು. -ಸುನಿಲ್