ಚೆಯ್ಯAಡಾಣೆ, ಏ. ೨೧: ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಕ್ಕಬ್ಬೆ ತಾಮರಾ ರೆಸಾರ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಲಕಾವೇರಿಗೆ ಯಾತ್ರಾರ್ಥಿಗಳು ಹೆಚ್ಚಾಗಿ ಆಗಮಿಸುತ್ತಿದ್ದು, ಇಲ್ಲಿ ಕಸ ಹಾಗೂ ಬಾಟಲಿಗಳನ್ನು ಅಲ್ಲಲ್ಲಿ ಬಿಟ್ಟು ತೆರಳುತ್ತಿದ್ದಾರೆ. ಸುಮಾರು ೨೪ಕ್ಕೂ ಹೆಚ್ಚು ಕಸದ ಚೀಲ ಪ್ಲಾಸ್ಟಿಕ್, ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ರೆಸಾರ್ಟ್ಗೆ ತಂದು ವಿಲೇವಾರಿ ಮಾಡಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ತಾಮರಾ ರೆಸಾರ್ಟ್ನ ವ್ಯವಸ್ಥಾಪಕ ಕೃಷ್ಣಕುಮಾರ್ ಬಾಜ್ ಪೈ ಹಾಗೂ ಗಿರೀಶ್ ಸುಬ್ಬಯ್ಯ ವಹಿಸಿದ್ದರು. ಈ ಸಂದರ್ಭ ರೆಸಾರ್ಟ್ನ ನೀತು ಬೋಪ್ಪಣ್ಣ, ಸಾಜಿ ಗೋಪಾಲನ್, ಅಂಜಿತ್, ಚಂಗಪ್ಪ, ಸುನಿಲ್, ದೀಕ್ಷಿತ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.