ಮಡಿಕೇರಿ, ಏ. ೨೧: ಮಡಿಕೇರಿ ನಗರದ ಹೊರವಲಯದ ಕನ್ನಂಡಬಾಣೆಯಲ್ಲಿರುವ ರಾಜ್ಯದ ಏಕೈಕ ದೃಷ್ಟಿ ಗಣಪತಿ ದೇವಾಲಯದಲ್ಲಿ ತಾ. ೨೨ ಮತ್ತು ೨೩ರಂದು ೧೯ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ. ಅಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ತಾ. ೨೨ರಂದು ಸಂಜೆ ೬ ಗಂಟೆಗೆ ಗಣಹೋಮ, ವಾಸ್ತುಹೋಮ, ಸ್ಥಳಶುದ್ಧಿ, ಬಿಂಬಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತುಬಲಿ, ಪ್ರಾಸಾದ ಶುದ್ಧಿ, ಸುದರ್ಶನ ಹೋಮ, ತೀರ್ಥ ಪ್ರಸಾದ, ಅನ್ನ ಪ್ರಸಾದ ವಿನಿಯೋಗ ನಡೆಯಲಿದೆ.

ತಾ.೨೩ರಂದು ಬೆಳಿಗ್ಗೆ ೭ ಗಂಟೆಯಿAದ ಸಾಮೂಹಿಕ ಗಣಹೋಮ, ಆಶ್ಲೇಷಬಲಿ, ಕಲಶಪೂಜೆ, ನಾಗತಂಬಿಲ, ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಪ್ರಕಟಣೆ ತಿಳಿಸಿದೆ.