ನಾಪೋಕ್ಲು, ಏ. ೨೧: ಪಟ್ಟಣ ವ್ಯಾಪ್ತಿ ಹಾಗೂ ಮೂರ್ನಾಡು ಸುತ್ತಮುತ್ತ ಶುಕ್ರವಾರ ಉತ್ತಮ ಮಳೆಯಾಗಿದ್ದು ಕಾದ ಭೂಮಿಗೆ ತಂಪೆರೆದಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಧಗೆ ಹೆಚ್ಚಿದ್ದು ಬಹುತೇಕ ಕಾಫಿ ತೋಟಗಳಲ್ಲಿ ಕಾಫಿಯ ಗಿಡಗಳು ಬಿಸಿಲಿನ ಜಳಕ್ಕೆ ಬಾಡಿದ್ದವು. ಈ ವರ್ಷ ಸರಿಯಾಗಿ ಹೂವು ಮಳೆಯಾಗದೆ ಪರಿತಪಿಸುತ್ತಿದ್ದ ರೈತರು ಇಂದು ಸುರಿದ ಮಳೆಯ ಸಿಂಚನದಿAದ ಸಮಾಧಾನಪಟ್ಟಿದ್ದಾರೆ. ಕಾಫಿ ಹಾಗೂ ಕಾಳುಮೆಣಸಿನ ಬಳ್ಳಿಗಳಿಗೆ ಈ ಅವಧಿಯಲ್ಲಿ ಉತ್ತಮ ಮಳೆ ಅವಶ್ಯಕತೆ ಇದ್ದು ಈ ವರ್ಷ ಮಳೆಯಿಂದ ವಂಚಿತರಾಗಿದ್ದ ಬೆಳೆಗಾರರಿಗೆ ಮಳೆ ಖುಷಿ ತಂದಿದೆ. ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ. ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಹಲವೆಡೆ ನೀರು ಇಳಿಮುಖಗೊಂಡು, ಸಮಸ್ಯೆ ಕಾಡಿತ್ತು. ಇದೀಗ ಸುರಿದ ಮಳೆ ಜನರ ಬವಣೆಯನ್ನು ಕೊಂಚಮಟ್ಟಿಗೆ ದೂರ ಮಾಡಿದೆ.
-ದುಗ್ಗಳ ಸದಾನಂದ