ಭಾಗಮಂಡಲ, ಏ. ೨೧: ಸಮೀಪದ ಚೆಟ್ಟಿ ಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ೨೦೨೩ ಶುಕ್ರವಾರದ ಪಂದ್ಯಗಳಲ್ಲಿ ಮೊದಲು ಬೊಳ್ತಜ್ಜಿರ ಮತ್ತು ದೇವಾಯಿರ ತಂಡಗಳು ಸೆಣಸಾಡಿದವು. ದೇವಾಯಿರ ತಂಡ ಮೂರು ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿದರೆ ಬೊಳ್ತಜ್ಜಿರ ತಂಡ ಮೂರು ವಿಕೆಟ್ ನಷ್ಟಕ್ಕೆ ೫೨ ರನ್‌ಗಳಿಸಿ ೭ ರನ್‌ಗಳ ಜಯ ಸಾಧಿಸಿತು. ಬೊಳ್ತಜ್ಜಿರ ಮತ್ತು ಶೇರಮರಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ . ಬೊಳ್ತಜ್ಜಿರ ಐದು ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಸಿದರೆ ಶೇರ ಮರಕಡ ತಂಡ ಒಂದು ವಿಕೆಟ್ ನಷ್ಟಕ್ಕೆ ೪೮ ರನ್‌ಗಳಿಸಿ ೯ ವಿಕೆಟ್‌ಗಳ ಜಯ ಸಾಧಿಸಿತು.

ಕಾಳೆಯಂಡ ಮತ್ತು ಪಾಲಾರ ಗುಂಡ್ಯ ತಂಡಗಳ ನಡುವೆ ನಡೆದ ಪಂದ್ಯ ಸಮಬಲದಿಂದ ಕೂಡಿದ್ದು ಎರಡು ತಂಡಗಳು ತಲಾ ೫೪ ರನ್ ಗಳಿಸಿದವು. ಸೂಪರ್ ಓವರ್‌ನಲ್ಲಿ ಕಾಳೆಯಂಡ ತಂಡ ಪಾಲಾರ ಗುಂಡ್ಯ ತಂಡದ ವಿರುದ್ಧ ಜಯ ಸಾಧಿಸಿತು, ಕಾಳೆಯಂಡ ಮತ್ತು ನೂಜಿಬೈಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಳೆಯಂಡ ತಂಡಕ್ಕೆ ಎರಡು ರನ್ ಗಳ ಗೆಲುವು ಲಭಿಸಿತು. -ಸುನಿಲ್